ಕರ್ನಾಟಕ

karnataka

ETV Bharat / sports

ಮೈದಾನದಲ್ಲಿ ಸದಾ ಚುರುಕು, ಬ್ಯಾಟಿಂಗ್​ನಲ್ಲಿ ರನ್​ ಮಷಿನ್​​... ಕೊಹ್ಲಿ ಪಯಣಕ್ಕೆ ಹನ್ನೊಂದು ಸಾರ್ಥಕ ವರ್ಷ - ಕೊಹ್ಲಿ ವಿಶೇಷ ದಿನದಂದು ಟ್ವೀಟ್

ಫಾರ್ಮ್​ ಕಳೆದುಕೊಳ್ಳದೆ, ಸದಾ ಫಿಟ್​ ಆಗಿ ಮೈದಾನದ ತುಂಬೆಲ್ಲ ಚುರುಕಾಗಿ ಓಡಾಡುವ ಕೊಹ್ಲಿ ವಿಶೇಷ ದಿನದಂದು ಟ್ವೀಟ್ ಮಾಡಿ ಗೆಲುವಿನ ಪಾಲುದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ವಿರಾಟ್ ಕೊಹ್ಲಿ

By

Published : Aug 19, 2019, 12:41 PM IST

ಹೈದರಾಬಾದ್:2008ರ ಆಗಸ್ಟ್ 18ರಂದು ಏಕದಿನ ಕ್ರಿಕೆಟ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಪರಿಚಿತವಾದ ಮುಖ ವಿರಾಟ್ ಕೊಹ್ಲಿ.

ಇನ್ನೂ ಸರಿಯಾಗಿ ಮೀಸೆಯೂ ಮೂಡಿರದ ಕೊಹ್ಲಿ ಕಣ್ಣಲ್ಲಿ ಸಾಧಿಸುವ ತುಡಿತ ಎದ್ದು ಕಾಣುತ್ತಿತ್ತು. ವಿರಾಟ್ ಆಟದಲ್ಲಿ ರನ್ ದಾಹ ಇರೋದು ಕ್ರಿಕೆಟ್ ಅಭಿಮಾನಿಗಳಿಗೆ ಅರಿವಿಗೆ ಬರೋಕೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಸದ್ಯ ಇದೇ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ವಿ ಹನ್ನೊಂದು ವರ್ಷ ಪೂರೈಸಿದ್ದಾರೆ.

ಪದಾರ್ಪಣೆ ವೇಳೆ ವಿರಾಟ್ ಕೊಹ್ಲಿ

ಫಾರ್ಮ್​ ಕಳೆದುಕೊಳ್ಳದೇ, ಸದಾ ಫಿಟ್​ ಆಗಿ ಮೈದಾನದ ತುಂಬೆಲ್ಲಾ ಚುರುಕಾಗಿ ಓಡಾಡುವ ಕೊಹ್ಲಿ ವಿಶೇಷ ದಿನದಂದು ಟ್ವೀಟ್ ಮಾಡಿ ಗೆಲುವಿನ ಪಾಲುದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಅಭಿಮಾನಿಗಳ ಪ್ರೀತಿ, ಯಶಸ್ಸು ಎಲ್ಲವನ್ನೂ ದೇವರು ನನಗೆ ದಯಪಾಲಿಸುತ್ತಾನೆ ಎನ್ನುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಆ ದೇವರು ನಿಮಗೆಲ್ಲರಿಗೂ ನೀವು ಆರಿಸಿಕೊಂಡ ಮಾರ್ಗದಲ್ಲಿ ನಡೆಯಲು ಶಕ್ತಿ ಹಾಗೂ ಸಾಮರ್ಥ್ಯವನ್ನು ನೀಡಲಿ ಹಾಗೂ ಸರಿಯಾದ ದಾರಿಯನ್ನೇ ಆಯ್ಕೆ ಮಾಡಿ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾದ ಡಂಬುಲಾದಲ್ಲಿ 2008ರ ಆಗಸ್ಟ್ 18ರಂದು ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದರು. ಹಂತ ಹಂತವಾಗಿ ಬೆಳೆಯುತ್ತಾ ಇದೀಗ ತಂಡದ ಜವಾಬ್ದಾರಿ ವಹಿಸಿಕೊಂಡು ಯಶಸ್ಸಿನ ಬೆನ್ನೇರಿ ಮುಂದೆ ಸಾಗಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್

ABOUT THE AUTHOR

...view details