ಲಂಡನ್ :ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ಡೇವಿಡ್ ಗೋವರ್ ತಮ್ಮ ಪ್ರಸ್ತುತ ಅತ್ಯುತ್ತಮ ಟೆಸ್ಟ್ ತಂಡವನ್ನು ಪ್ರಕಟಿಸಿದ್ದಾರೆ. ಅದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನೇ ಕ್ಯಾಪ್ಟನ್ ಆಗಿ ನೇಮಿಸಿದ್ದಾರೆ. ಜೊತೆಗೆ ಫ್ಯಾಬ್ 4ನಲ್ಲಿರುವ ಎಲ್ಲಾ ಆಟಗಾರರನ್ನು ಸೇರಿಸಿದ್ದಾರೆ.
ಡೇವಿಡ್ ಗೋವರ್ ಘೋಷಿಸಿರುವ ತಂಡದಲ್ಲಿ ಕೊಹ್ಲಿಯಲ್ಲದೆ ಭಾರತದ ಆರ್. ಅಶ್ವಿನ್ ಹೆಸರು ಕೂಡ ಇದೆ. ಉಳಿದಂತೆ ಫ್ಯಾಬ್ 4 ಕ್ರಿಕೆಟಿಗರಾದ ಕೇನ್ ವಿಲಿಯಮ್ಸನ್, ಜೋ ರೂಟ್, ಸ್ಟಿವ್ ಸ್ಮಿತ್ ಮತ್ತು ಪ್ಯಾಟ್ ಕಮ್ಮಿನ್ಸ್, ಜೋಸ್ ಬಟ್ಲರ್, ನಥನ್ ಲಿಯಾನ್, ರವಿ ಚಂದ್ರನ್ ಅಶ್ವಿನ್ ಹಾಗೂ ಬೆನ್ ಸ್ಟೋಕ್ಸ್ರನ್ನು ಆಯ್ಕೆ ಮಾಡಿದ್ದಾರೆ.
ತಮ್ಮ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಬೇಕೆಂದರೆ ವಿರಾಟ್ ಮತ್ತು ಬೆನ್ ಸ್ಟೋಕ್ಸ್ ತ್ವರಿತ ಆಯ್ಕೆಯಾಗಿರುತ್ತದೆ. ಜೊತೆಗೆ ನಾಯಕನನ್ನು ಆಯ್ಕೆ ಮಾಡಬೇಕೆಂದರೆ ಎರಡನೇ ಯೋಚನೆಯಿಲ್ಲದೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುತ್ತೇನೆ. ವಿರಾಟ್ ಅವರ ಪ್ರತಿಭೆಯನ್ನು ಹೊರೆತುಪಡಿಸಿ ನಾನು ಅವರ ಉತ್ಸಾಹ ಮತ್ತು ಸಪೂರ್ಣ ಚಲನೆಯನ್ನು ಇಷ್ಟಪಡುತ್ತೇನೆ. ಕ್ರಿಕೆಟ್ ಒಂದು ಅದ್ಭುತ ಆಟವಾಗಿದ್ದು, ಅಲ್ಲಿ ನೀವು ತಂಡದೊಳಗೆ ಪ್ರತ್ಯೇಕವಾಗಿ ಅದ್ಭುತ ಎನಿಸಿಕೊಳ್ಳಬಹುದು. ಆದರೆ, ಹೆಚ್ಚಿನ ಪ್ರತ್ಯೇಕತೆಯು ಹಾನಿಕಾರಕಬಹುದು. ಆದರೆ, ವಿರಾಟ್ ತಂಡಕ್ಕೆ ಅಸಾಧಾರಣ ವೈಯಕ್ತಿಕ ಕೊಡುಗೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೊಹ್ಲಿಯನ್ನು ಮೆಚ್ಚಿ ಮಾತನಾಡಿರುವ ಅವರು ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಕೊಹ್ಲಿ ಅದ್ಭುತ ಆಟಗಾರ, ವಿಶ್ವದಲ್ಲಿ ಕಠಿಣ ಮಾದರಿ ಎಂದು ಕರೆಸಿಕೊಳ್ಳುವ ಟೆಸ್ಟ್ಕ್ರಿಕೆಟ್ನ ಪಿಆರ್ ಎಂದು ತಿಳಿಸಿದ್ದಾರೆ.