ದುಬೈ:ಕೊಹ್ಲಿ ಬ್ಯಾಟಿಂಗ್ ವೈಭವ ಹಾಗೂ ಬೌಲರ್ಗಳ ಅದ್ಭುತ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ 37 ರನ್ಗಳ ಸುಲಭ ಜಯ ಸಾಧಿಸಿದೆ.
ಆರ್ಸಿಬಿ ನೀಡಿ170 ರನ್ ಗುರಿ ಬೆನ್ನತ್ತಿದ 3 ಬಾರಿಯ ಚಾಂಪಿಯನ್ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸು ಮೂಲಕ ಟೂರ್ನಿಯಲ್ಲಿ 5ನೇ ಸೋಲುಕಂಡಿತು. ಅಂಬಾಟಿ ರಾಯುಡು 40 ಎಸೆತಗಳಲ್ಲಿ 42 ಹಾಗೂ ಎನ್ ಜಗದೀಶನ್ 28 ಎಸೆತಗಳಲ್ಲಿ 33 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಉಳಿದಂತೆ ಶೇನ್ ವಾಟ್ಸನ್ 14, ಫಾಫ್ ಡು ಪ್ಲೆಸಿಸ್ 8, ಧೋನಿ 10, ಸ್ಯಾಮ್ ಕರ್ರನ್ 0, ಜಡೇಜಾ 7, ಬ್ರಾವೋ 7 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಆರಂಭಿಕರ ವೈಫಲ್ಯ ಹಾಗೂ ಮಧ್ಯಮ ಕ್ರಮಾಂಕ ನಿಧಾನಗತಿ ಆಡದಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್ಗಳಿಸಿತು.
ಆರ್ಸಿಬಿ ಪರ ಕ್ರಿಸ್ ಮೋರಿಸ್ 19 ರನ್ ನೀಡಿ 3 ವಿಕೆಟ್, ವಾಷಿಂಗ್ಟನ್ ಸುಂದರ್ 16 ರನ್ ನೀಡಿ 2 ವಿಕೆಟ್ , ಉದಾನ ಮತ್ತು ಚಹಾಲ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕು ಮೊದಲು ಬ್ಯಾಟಿಂಗ್ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಆರ್ಸಿಬಿ ಆರಂಭಿಕ ಆಘಾತ ಅನುಭವಿಸಿದರೂ ನಾಯಕ ಕೊಹ್ಲಿಯ ಅಜೇಯ 90 ರನ್ಗಳ ನೆರವಿನಿಂದ 169 ರನ್ಗಳಿಸಿತ್ತು. ಕೊಹ್ಲಿಗೆ ಸಾಥ್ ನೀಡಿದ್ದ ಪಡಿಕ್ಕಲ್ 33, ಹಾಗೂ ಶಿವಂ ದುಬೆ 22 ರನ್ಗಳಿಸಿದ್ದರು.
ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ 5 ನೇ ಸೋಲು ಕಾಣುವ ಮೂಲಕ 6ನೇ ಸ್ಥಾನದಲ್ಲೇ ಉಳಿಯಿತು.