ಕರ್ನಾಟಕ

karnataka

ETV Bharat / sports

ಸಚಿನ್​ ದಾಖಲೆ ಮುರಿದ ವಿರಾಟ್​​: ವೇಗದ ರನ್ ಸರದಾರನಾದ ಕಿಂಗ್ ಕೊಹ್ಲಿ - Virat Kohli becomes the fastest batsman to reach 12,000 ODI runs

ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ತಮ್ಮ 309ನೇ ಏಕದಿನ ಪಂದ್ಯದಲ್ಲಿ 12 ಸಾವಿರ ರನ್ ದಾಖಲಿಸಿ ವಿಶೇಷ ಸಾಧನೆ ಮಾಡಿದ್ದರು. ಆಸೀಸ್​​ನ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ 323ನೇ ಪಂದ್ಯದಲ್ಲಿ ಈ ರನ್ ಗಡಿ ದಾಟಿದ ಸಾಧನೆ ಮಾಡಿದ್ದರು.

virat kohli
virat kohli

By

Published : Dec 2, 2020, 11:00 AM IST

ಕ್ಯಾನ್ಬೆರಾ (ಆಸ್ಟ್ರೇಲಿಯಾ):ಆಸೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಅತ್ಯಂತ ವೇಗವಾಗಿ 12 ಸಾವಿರ ಏಕದಿನ ರನ್ ದಾಖಲಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಅವರು ಭಾಜನರಾದರು. ಈ ಮೂಲಕ ಭಾರತದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಾಧನೆ ಮುರಿದಿದ್ದಾರೆ.

ಇಂದು ತಮ್ಮ 251ನೇ ಏಕದಿನ ಪಂದ್ಯವಾಡುತ್ತಿರುವ ನಾಯಕ ಕೊಹ್ಲಿ ಈ ಸಾಧನೆ ಮಾಡಿದರು. ಅಂತರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ತಾವು ಆಡಿರುವ 251 ಪಂದ್ಯದಲ್ಲಿ 43 ಶತಕ, 59 ಅರ್ಧಶತಕ ಬಾರಿಸಿರುವುದಲ್ಲದೆ, 60 ರನ್​ಗಳ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.

ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ತಮ್ಮ 309ನೇ ಏಕದಿನ ಪಂದ್ಯದಲ್ಲಿ 12 ಸಾವಿರ ರನ್ ದಾಖಲಿಸಿ ಜಗತ್ತಿನ ಗಮನ ಸೆಳೆದಿದ್ದರು. ಇವರ ಜೊತೆಗೆ ಆಸೀಸ್​​ನ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ 323ನೇ ಪಂದ್ಯದಲ್ಲಿ 12 ಸಾವಿರ ರನ್ ಗಡಿ ದಾಟಿದ್ದಾರೆ.

ಇದೀಗ ವಿರಾಟ್ ಕೊಹ್ಲಿ ಕೇವಲ 251ನೇ ಪಂದ್ಯದಲ್ಲಿಯೇ 12 ಸಾವಿರ ರನ್ನುಗಳ ಗಡಿ ದಾಟಿ ಮಿಂಚಿನ ವೇಗದಲ್ಲಿ ರನ್ ಗಳಿಸುತ್ತಿರುವ ಆಟಗಾರ ಎನಿಸಿದ್ದಾರೆ.

ABOUT THE AUTHOR

...view details