ಕರ್ನಾಟಕ

karnataka

ETV Bharat / sports

ಗಂಗೂಲಿ ದಾಖಲೆ ಮುರಿದು, ಧೋನಿ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ.. - ವೆಸ್ಟ್​ ಇಂಡೀಸ್​-ಭಾರತ

ನಾಯಕನಾಗಿ ವಿದೇಶದಲ್ಲಿ 26 ಟೆಸ್ಟ್​ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಕೊಹ್ಲಿ 12ರಲ್ಲಿ ಗೆಲುವು ತಂದುಕೊಡುವ ಮೂಲಕ ಭಾರತ ತಂಡದ ಪರ ವಿದೇಶದಲ್ಲಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದ ದಾಖಲೆಗೆ ಪಾತ್ರರಾದರು.

Virat Kohli

By

Published : Aug 26, 2019, 9:26 AM IST

ಆ್ಯಂಟಿಗುವಾ​: ವಿಂಡೀಸ್​ ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನು 318 ರನ್​ಗಳಿಂದ ಗೆಲ್ಲುತ್ತಿದ್ದಂತೆ ನಾಯಕ ವಿರಾಟ್‌ ಕೊಹ್ಲಿ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ.

ನಾಯಕನಾಗಿ ವಿದೇಶದಲ್ಲಿ 26 ಟೆಸ್ಟ್​ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಕೊಹ್ಲಿ 12ರಲ್ಲಿ ಗೆಲುವು ತಂದುಕೊಡುವ ಮೂಲಕ ಭಾರತ ತಂಡದ ಪರ ವಿದೇಶದಲ್ಲಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದ ನಾಯಕ ಎಂಬ ದಾಖಲೆಗೆ ಪಾತ್ರರಾದರು.ಕೊಹ್ಲಿಯನ್ನು ಬಿಟ್ಟರೆ ಗಂಗೂಲಿ ವಿದೇಶದಲ್ಲಿ 18 ಟೆಸ್ಟ್​ ಪಂದ್ಯಗಳನ್ನು ಮುನ್ನಡಿಸಿ 11 ಗೆಲುವು, ಧೋನಿ 30 ಪಂದ್ಯಗಳಲ್ಲಿ 6 ಗೆಲುವು, ದ್ರಾವಿಡ್​ 17 ಪಂದ್ಯಗಳಲ್ಲಿ 5 ಗೆಲುವು ತಂದುಕೊಡುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.

ಇನ್ನು ನಾಯಕನಾಗಿ ಕೊಹ್ಲಿ 47 ಪಂದ್ಯಗಳಲ್ಲಿ 27 ಗೆಲುವು ಸಾಧಿಸಿ ಭಾರತದ ಮಾಜಿ ನಾಯಕ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಧೋನಿ ನೇತೃತ್ವದಲ್ಲಿ ಭಾರತ ತಂಡ 60 ಪಂದ್ಯಗಳಲ್ಲಿ 26 ಗೆಲುವು ಸಾಧಿಸಿತ್ತು.ಉಳಿದಂತೆ ಸೌರವ್‌ ಗಂಗೂಲಿ 49 ಪಂದ್ಯಗಳಲ್ಲಿ ನಾಯಕನಾಗಿದ್ದು, 21ರಲ್ಲಿ ಜಯ ತಂದುಕೊಟ್ಟಿದ್ದಾರೆ. ಮೊಹ್ಮದ್​ ಅಜರುದ್ದೀನ್​ 47 ಪಂದ್ಯಗಳಲ್ಲಿ ನಾಯಕನಾಗಿದ್ದು, 14 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಜಯ ತಂದು ಕೊಟ್ಟಿದ್ದಾರೆ.

ABOUT THE AUTHOR

...view details