ಪೋರ್ಟ್ ಆಪ್ ಸ್ಪೇನ್:ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ನಾಯಕ ವಿರಾಟ್ ಕೊಹ್ಲಿ ತಮ್ಮ ಟ್ರ್ಯಾಕ್ಗೆ ಮರಳಿದ್ದಾರೆ. ನಾಯಕನ ಶತಕದ ಬಗ್ಗೆ ವೇಗಿ ಭುವನೇಶ್ವರ್ ಕುಮಾರ್ ಕುತೂಹಲಕಾರಿ ವಿಚಾರವೊಂದನ್ನು ಹೊರಹಾಕಿದ್ದಾರೆ.
ಮಾರ್ಚ್ 8ರಂದು ಆಸೀಸ್ ವಿರುದ್ಧ ರಾಂಚಿ ಮೈದಾನದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಸುಮಾರು ಐದು ತಿಂಗಳ ಅವಧಿಯಲ್ಲಿ ಮೂರಂಕಿ ಗಡಿ ತಲುಪಿರಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಐದು ಅರ್ಧಶತಕ ಬಾರಿಸಿದ್ದರೂ ಶತಕ ಮಾತ್ರ ವಿರಾಟ್ ಬ್ಯಾಟ್ನಿಂದ ಬಂದಿರಲಿಲ್ಲ.
ಶತಕ ಸಿಡಿಸಿದ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಪಂದ್ಯಶ್ರೇಷ್ಠ ವಿಜೇತ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್, ವಿರಾಟ್ ಕೊಹ್ಲಿ ಶತಕದ ದಾಹದಲ್ಲಿದ್ದರು. ಮೂರಂಕಿ ತಲುಪಿದ ಬಳಿಕ ಆ ಕೊಹ್ಲಿ ಮುಖದಲ್ಲಿ ಆ ತುಡಿತ ಎದ್ದು ಕಾಣುತ್ತಿತ್ತು. ಕಷ್ಟಕರ ಪಿಚ್ನಲ್ಲಿ ಬ್ಯಾಟ್ ಮಾಡಿದ್ದೇನೆ ಎಂದು ಶತಕ ಸಿಡಿಸಿ ಔಟಾಗಿ ಪೆವಿಲಿಯನ್ ಸೇರಿದ ಬಳಿಕ ಕೊಹ್ಲಿ ಹೇಳಿದ್ದರು ಎಂದು ಭುವಿ ವಿವರಿಸಿದ್ದಾರೆ.
ಮಳೆ ಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯರನ್ನು 59 ರನ್ಗಳಿಂದ ಗೆಲುವು ದಾಖಲಿಸಿತ್ತು. ಬ್ಯಾಟಿಂಗ್ನಲ್ಲಿ ವಿರಾಟ್ ಅಬ್ಬರಿಸಿದ್ದರೆ, ಬೌಲಿಂಗ್ ನಾಲ್ಕು ವಿಕೆಟ್ ಕಿತ್ತು ಭುವನೇಶ್ವರ್ ಕುಮಾರ್ ಗಮನ ಸೆಳೆದರು.