ಕರ್ನಾಟಕ

karnataka

ETV Bharat / sports

'ಎಬಿಡಿ​​​ ಅತ್ಯಂತ ಪ್ರಾಮಾಣಿಕ ವ್ಯಕ್ತಿ': ಮಿ.360ಗೆ ಕೊಹ್ಲಿ,ಯುವಿ ಬೆಂಬಲ

ವಿಶ್ವಕಪ್​​ನ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ಸೋಲು ಕಾಣುತ್ತಿದ್ದಂತೆ ಎಬಿ ಡಿವಿಲಿಯರ್ಸ್​ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು ಎಂಬ ವದಂತಿ ಹರಡಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೊಹ್ಲಿ,ಯುವರಾಜ್​ ಸಿಂಗ್​ ಮಾತನಾಡಿದ್ದಾರೆ.

ಎಬಿ ಡಿವಿಲಿಯರ್ಸ್​​

By

Published : Jul 13, 2019, 4:08 PM IST

ಮುಂಬೈ:ಐಸಿಸಿ ವಿಶ್ವಕಪ್​​ನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲೇ ಭಾರತದ ವಿರುದ್ಧ ಸೋಲುತ್ತಿದ್ದಂತೆ ಎಬಿಡಿ ತಂಡ ಸೇರಿಕೊಳ್ಳಲು ಮುಂದಾಗಿ, ಆಯ್ಕೆ ಸಮಿತಿ ಮುಂದೆ ಬೇಡಿಕೆ ಇಟ್ಟಿದ್ದರು ಎಂಬ ಸುದ್ದಿ ಹರಡಿತ್ತು. ಅದಕ್ಕೆ ನಿನ್ನೆ ಖುದ್ದಾಗಿ ಮಿ.360 ಸ್ಪಷ್ಟನೆ ಸಹ ನೀಡಿದ್ದಾರೆ.

ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ಮಾಜಿ ಆಟಗಾರ ಯುವರಾಜ್​ ಸಿಂಗ್ ಮಾತನಾಡಿದ್ದು, ಎಬಿಡಿ ಪರ ಬ್ಯಾಟ್​ ಬೀಸಿದ್ದಾರೆ.

ಕೊಹ್ಲಿ,ಯುವರಾಜ್​ ಸಿಂಗ್​​​

ವಿಶ್ವಕಪ್​​ನಲ್ಲಿ ತಂಡ ಸೇರಲು ಬಯಸಿದ್ದರೆ ಎಬಿಡಿ? ಕೊನೆಗೂ ಮೌನ ಮುರಿದ Mr.360!

ನನ್ನ ಸಹೋದರನಂತಿರುವ ಎಬಿಡಿ ತುಂಬ ಪ್ರಾಮಾಣಿಕ ವ್ಯಕ್ತಿ. ತಮ್ಮ ಹೇಳಿಕೆಗೆ ಬದ್ಧವಾಗಿರುವ ವ್ಯಕ್ತಿಯಾಗಿರುವ ಅವರು ಈ ರೀತಿಯಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಅವರೊಂದಿಗೆ ನಾನು ತುಂಬಾ ಸಮಯ ಕಳೆದಿದ್ದು, ಇಂತಹ ವಿವಾದದಿಂದ ಅವರು ಆದಷ್ಟು ದೂರ ಉಳಿಯಲು ಇಷ್ಟಪಡುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ.

ಯುವರಾಜ್​ ಸಿಂಗ್​ ಕೂಡ ಎಬಿ ಡಿವಿಲಿಯರ್ಸ್​ ಪರ ಮಾತನಾಡಿದ್ದು, ಅವರು ಈ ರೀತಿಯಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ನೀವೊಬ್ಬ ಲೆಜೆಂಡ್​ ಆಗಿದ್ದು, ಈ ರೀತಿಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.

ಎಬಿಡಿ ಸ್ಪಷ್ಟನೆ ಏನಾಗಿತ್ತು?

ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದ ಎಬಿಡಿ, 2018ರಲ್ಲೇ ನಾನು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದು, ಯಾವುದೇ ಕಾರಣಕ್ಕೂ ಮರಳಿ ತಂಡ ಸೇರಿಕೊಳ್ಳುವ ಮಾತಿಲ್ಲ. ಇದಕ್ಕೆ ಸಂಬಂಧಿಸಿದಂತೆ ನನ್ನ ಹಾಗೂ ಕ್ರಿಕೆಟ್​ ಮಂಡಳಿ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದರು.

ABOUT THE AUTHOR

...view details