ಕರ್ನಾಟಕ

karnataka

ETV Bharat / sports

ವಿರಾಟ್​ ಕೊಹ್ಲಿಗೆ ಜೀವ ಬೆದರಿಕೆಯೊಡ್ಡಿದ ಉಗ್ರ ಸಂಘಟನೆ! - All India Lashkar-e-Taiba threaten to Kohli

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ)ಗೆ ಈ ಮೇಲ್​ ರವಾನೆ ಮಾಡಿರುವ ಲಷ್ಕರ್​- ಎ- ತೋಯ್ಬಾ ಸಂಘಟನೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ  ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ರಚಿವ ರಾಜ್​ನಾಥ್​ ಸಿಂಗ್​ ಸೇರಿದಂತೆ ರಾಜಕೀಯ ಗಣ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ

Virat Kohli terror threat, ವಿರಾಟ್​ ಕೊಹ್ಲಿಗೆ ಜೀವಬೆದರಿಕೆ

By

Published : Oct 29, 2019, 1:10 PM IST

ನವದೆಹಲಿ: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಇತರ ಆಟಗಾರರನ್ನು ಕೊಲ್ಲುವುದಾಗಿ ಉಗ್ರ ಸಂಘಟನೆಯೊಂದು ಬೆದರಿಕೆ ಪತ್ರ ರವಾನಿಸಿದ್ದು, ಬಿಸಿಸಿಐ ಹಾಗೂ ಆಟಗಾರರು ಆತಂಕಕ್ಕೊಳಗಾಗಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ)ಗೆ ಇ -ಮೇಲ್​ ಮೂಲಕ ದೇಶದಲ್ಲಿ ಸಂಘಟಿತವಾಗಿರುವ ಆಲ್ ಇಂಡಿಯಾ ಲಷ್ಕರ್​ -ಎ- ತೋಯ್ಬಾ ಸಂಘಟನೆ ಪ್ರಧಾನಿ ನರೇಂದ್ರ ಮೋದಿಯಿಂದ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿವರೆಗೆ ಅನೇಕ ನಾಯಕರನ್ನು ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ)ಗೆ ಈ ಮೇಲ್​ ರವಾನೆ ಮಾಡಿರುವ ಲಷ್ಕರ್​-ಎ-ತೋಯ್ಬಾ ಸಂಘಟನೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ರಚಿವ ರಾಜ್​ನಾಥ್​ ಸಿಂಗ್​ ಸೇರಿದಂತೆ ರಾಜಕೀಯ ಗಣ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದೆ ಎನ್ನಲಾಗಿದೆ.

ರಾಜಕೀಯ ಗಣ್ಯರು ಸಿನಿಮಾ ನಟರು ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದ ಉಗ್ರರು ಇದೇ ಮೊದಲ ಬಾರಿಗೆ ಕ್ರಿಕೆಟ್​ ಆಟಗಾರನೊಬ್ಬನಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಬಿಸಿಸಿಐ ಆತಂಕದಲ್ಲಿದ್ದು, ತಮ್ಮ ಆಟಗಾರರಿಗೆ ಭದ್ರತೆ ಒದಗಿಸಿಕೊಡುವಂತೆ ಕೋರಿದೆ. ಮುಂದಿನ ತಿಂಗಳು ಬಾಂಗ್ಲಾದೇಶದ ವಿರುದ್ದ ಸರಣಿ ಇರುವುದರಿಂದ ಆಟಗಾರರಿಗೆ ಯಾವುದೆ ತೊಂದರೆಯಾಗದಂತೆ ಭದ್ರತೆ ನೀಡಲು ಬಿಸಿಸಿಐ ಮನವಿ ಮಾಡಿದೆ

ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಮೂರು ಟಿ-20 ಮತ್ತು ಎರಡು ಟೆಸ್ಟ್​ ಸರಣಿ ಆಡಲು ಭಾರತಕ್ಕೆ ಆಗಮಿಸುತ್ತಿದೆ. ನವೆಂಬರ್​ 3 ರಂದು ದೆಹಲಿಯಲ್ಲಿ ಭಾರತ-ಬಾಂಗ್ಲಾದೇಶದ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಅರುಣ್ ಜೇಟ್ಲಿ ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗುತ್ತಿದೆ.

ABOUT THE AUTHOR

...view details