ರಾಂಚಿ:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೆ, ಇಂದು ಮೈದಾನದಲ್ಲಿ ಇಬ್ಬರೂ ಆಟಗಾರರು ಕಳೆದ ಕ್ಷಣವನ್ನ ಗಮನಿಸಿದ್ರೆ ಆ ಮಾತುಗಳು ಸುಳ್ಳು ಎಂದು ಸಾಬೀತು ಮಾಡಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್ ಪಂದ್ಯದ ವೇಲೆ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೈದಾನದಲ್ಲಿ ನಗು ನಗುತ್ತಾ ಕಾಲ ಕಳೆದ ವಿಡಿಯೋ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಬ್ಬರು ಆಟಗಾರರು ಸ್ಲಿಪ್ನಲ್ಲಿ ಕ್ಷೇತ್ರ ರಕ್ಷಣೆಗೆ ನಿಂತುಕೊಂಡಿರುವ ಸಮಯದಲ್ಲಿ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಮಾತನಾಡಿದ್ದಾರೆ. ಯಾವುದೋ ವಿಚಾರದ ಬಗ್ಗೆ ಇಬ್ಬರು ಆಟಗಾರರು ತಮಾಷೆ ಮಾಡುತ್ತ ಕಾಲ ಕಳೆದಿದ್ದಾರೆ.