ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ತಂಡದ ಮಾರಕ ವೇಗಿ ಡೇಲ್ ಸ್ಟೇನ್ ಖರೀದಿಸುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಯೋಜನೆಯ ಭಾಗವಾಗಿತ್ತು ಎಂದು ತಂಡದ ಡೈರೆಕ್ಟರ್ ಮೈಕ್ ಹೆಸ್ಸನ್ ಹೇಳಿದ್ದಾರೆ.
ಮಾರಕ ವೇಗಿ ಸ್ಟೇನ್ ಖರೀದಿ ಫ್ರಾಂಚೈಸಿ ಹಾಗೂ ಕೊಹ್ಲಿ ಯೋಜನೆಯ ಭಾಗವಾಗಿತ್ತು: ಆರ್ಸಿಬಿ - ರಾಯಲ್ ಚಾಲೇಂಜರ್ಸ್ ಬೆಂಗಳೂರು
ಆರ್ಸಿಬಿಯಿಂದ ರಿಲೀಸ್ ಆಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಇದೀಗ ಮತ್ತೊಮ್ಮೆ ಆರ್ಸಿಬಿ ಸೇರಿಕೊಂಡಿದ್ದು, ಈ ಬಗ್ಗೆ ತಂಡದ ನಿರ್ದೇಶಕರು ಮಾತನಾಡಿದ್ದಾರೆ.
ಡೇಲ್ ಸ್ಟೇನ್
ಕಳೆದೆರಡು ದಿನಗಳ ಹಿಂದೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಟೇನ್ 2 ಕೋಟಿ ರೂಗೆ ಆರ್ಸಿಬಿ ತಂಡದ ಪಾಲಾಗಿದ್ದಾರೆ. ಕಳೆದ ವರ್ಷವೂ ಆರ್ಸಿಬಿ ತಂಡದಲ್ಲಿದ್ದ ಇವರು ಗಾಯದ ಸಮಸ್ಯೆಯಿಂದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದರು. ಜತೆಗೆ ತಂಡದಿಂದಲೂ ಬಿಡುಗಡೆ ಹೊಂದಿದ್ದರು. ಇದೀಗ ತಂಡ ಅವರನ್ನು ವಾಪಸ್ ಖರೀದಿಸಿದೆ.
ಹರಾಜು ಪ್ರಕ್ರಿಯೆ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಆರ್ಸಿಬಿ ಶಿಮ್ರಾನ್ ಹೆಟ್ಮಾಯರ್,ಡೇಲ್ ಸ್ಟೇನ್ ಸೇರಿದಂತೆ ಒಟ್ಟು 12 ಆಟಗಾರರನ್ನು ರಿಲೀಸ್ ಮಾಡಿತ್ತು. ಆದರೀಗ ಮಾರಕ ವೇಗಿಯನ್ನು ಮತ್ತೊಮ್ಮೆ ಕೊಂಡುಕೊಂಡಿದ್ದು ತಂಡವನ್ನು ಬಿಗಿಗೊಳಿಸಿದೆ.