ಹೈದರಾಬಾದ್: ವಿವಿಧ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬಾಟಲ್ ಕ್ಯಾಪ್ ಚಾಲೆಂಜನ್ನು ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಮಾಡಿ ತೋರಿಸಿದ್ದಾರೆ.
'ವಾಟ್ ಅ ಶಾಟ್!' ಕೊಹ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಬೊಂಬಾಟ್! - ಬಾಟಲ್ ಕ್ಯಾಪ್ ಚಾಲೆಂಜ್
ವಿಂಡೀಸ್ ಪ್ರವಾಸದಲ್ಲಿರುವ ಕಪ್ತಾನ ಕೊಹ್ಲಿ ಕೊಂಚ ತಡವಾಗಿಯಾದರೂ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಇಂಟರೆಸ್ಟಿಂಗ್ ವಿಡಿಯೋ ಶೇರ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ
ವಿಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ ತಡವಾಗಿಯಾದ್ರೂ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ್ದಾರೆ. ಬ್ಯಾಟ್ ಮೂಲಕ ಕೊಹ್ಲಿ ಬಾಟಲ್ ಕ್ಯಾಪ್ ತೆಗೆದಿದ್ದು, ರವಿ ಶಾಸ್ತ್ರಿ ಕಾಮೆಂಟರಿ ಇದೆ.
ಸಿನಿಮಾ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರದ ಸೆಲಬ್ರೆಟಿಗಳು ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ್ದರು. ಇದೀಗ ಕೊಹ್ಲಿ ಈ ಚಾಲೆಂಜ್ ಹವಾ ಮುಗಿಯುವ ವೇಳೆ ತಮ್ಮದೇ ಸ್ಟೈಲ್‌ನಲ್ಲಿ ಮಾಡಿ ತೋರಿಸಿ ಸುದ್ದಿಯಾಗಿದ್ದಾರೆ.