ಕರ್ನಾಟಕ

karnataka

ETV Bharat / sports

ಇಂಡೊ-ಆಫ್ರಿಕನ್​ ಇಲೆವೆನ್​ ಹೆಸರಿಸಿದ ವಿರಾಟ್​-ಎಬಿಡಿ: ನಾಯಕನ ಸ್ಥಾನಕ್ಕೆ ಇಬ್ಬರ ಆಯ್ಕೆಯೂ ಒಬ್ಬನೇ?

ಇನ್​​​ಸ್ಟಾಗ್ರಾಂ ಲೈವ್​ ಸಂವಾದದಲ್ಲಿ ಎಬಿಡಿ-ವಿರಾಟ್ ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಅತ್ಯುತ್ತಮ ಕ್ರಿಕೆಟಿಗರನ್ನು ಸೇರಿಸಿ ಒಂದು ತಂಡವನ್ನು ಕಟ್ಟಿದ್ದಾರೆ. ಇದರಲ್ಲಿ ಇಬ್ಬರ ಸಮ್ಮತಿಯ ಮೇರೆಗೆ ಭಾರತ ತಂಡಕ್ಕೆ 2 ವಿಶ್ವಕಪ್​ ಸಹಿತ ಮೂರು ಐಸಿಸಿ ಟೂರ್ನಿಗಳನ್ನು ತಂದುಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿಯನ್ನು ನಾಯಕನನ್ನಾಗಿ ನೇಮಿಸಿದ್ದಾರೆ.

ವಿರಾಟ್​-ಎಬಿಡಿ
ವಿರಾಟ್​-ಎಬಿಡಿ

By

Published : Apr 25, 2020, 2:17 PM IST

ಮುಂಬೈ:ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಲೆಜೆಂಡ್​ ಎಬಿಡಿ ವಿಲಿಯರ್ಸ್​ ಇಂಡೋ- ಆಫ್ರಿಕನ್​ ತಂಡವನ್ನು ಆಯ್ಕೆ ಮಾಡಿದ್ದು ಎಂಎಸ್​ ಧೋನಿಯನ್ನು ನಾಯಕನನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

ಇನ್​​ಸ್ಟಾಗ್ರಾಂ ಲೈವ್​ ಸಂವಾದದಲ್ಲಿ ಎಬಿಡಿ-ವಿರಾಟ್ ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಅತ್ಯುತ್ತಮ ಕ್ರಿಕೆಟಿಗರನ್ನು ಸೇರಿಸಿ ಒಂದು ತಂಡವನ್ನು ಕಟ್ಟಿದ್ದಾರೆ. ಇದರಲ್ಲಿ ಇಬ್ಬರ ಸಮ್ಮತಿಯ ಮೇರೆಗೆ ಭಾರತ ತಂಡಕ್ಕೆ 2 ವಿಶ್ವಕಪ್​ ಸಹಿತ ಮೂರು ಐಸಿಸಿ ಟೂರ್ನಿಗಳನ್ನು ತಂದಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿಯನ್ನು ನಾಯಕನನ್ನಾಗಿ ನೇಮಿಸಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರರಾಗಿರುವ ಇವರಿಬ್ಬರು ಲೈವ್​ ವೇಳೆ ಕ್ರಿಕೆಟ್​ಗೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡರು.

ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಈ ಇಬ್ಬರು ಸ್ಟಾರ್​ ಕ್ರಿಕೆಟಿಗರು ಧೋನಿಯನ್ನು ನಾಯಕನನನ್ನಾಗಿ ನೇಮಕ ಮಾಡಿದರು. ಇನ್ನಳಿದಂತೆ ಭಾರತದಿಂದ 7 ದಕ್ಷಿಣ ಆಫ್ರಿಕಾ ತಂಡದಿಂದ 4 ಆಟಗಾರರನ್ನು ಈ ಜೋಡಿ ನೇಮಿಸಿದೆ.

ನಾನು ಯಾವಾಗಲೂ ಆತನನ್ನು ಗೌರವಿಸುತ್ತೇನೆ, ಅವರು ಯಾವಾಗಲೂ ತಾಳ್ಮೆ ಮತ್ತು ಆಟವನ್ನು ಹೇಗೆ ಆಡಿಸಬೇಕೆಂದು ಚೆನ್ನಾಗಿ ಬಲ್ಲವರಾಗಿದ್ದಾರೆ ಎಂದು ಎಬಿಡಿ ಧೋನಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ವಿವರಣೆ ನೀಡಿದ್ದಾರೆ.

​ಇನ್ನು ವಿರಾಟ್​ ಕೊಹ್ಲಿ, ನನಗೆ ಎಂಎಸ್​, ಅವರು ಬಾಗಶಃ ನಾಯಕ ಸ್ಥಾನಕ್ಕೆ ಸಮತೋಲನ ಹೊಂದಿರುವ ಆಟಗಾರ ಎಂದು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ-ಎಬಿ ಡಿ ವಿಲಿಯರ್ಸ್​ ನೆಚ್ಚಿನ ಇಂಡೊ-ಆಫ್ರಿಕನ್​ ತಂಡ

ಸಚಿನ್ ತೆಂಡೂಲ್ಕರ್​​, ರೋಹಿತ್ ಶರ್ಮಾ​, ವಿರಾಟ್​ ಕೊಹ್ಲಿ, ಯುವರಾಜ್​ ಸಿಂಗ್​, ಯಜುವೇಂದ್ರ ಚಹಲ್​, ಜಸ್ಪ್ರೀತ್​ ಬುಮ್ರಾ, ಎಂಎಸ್​ ಧೋನಿ, ಜಾಕ್​ ಕಾಲೀಸ್​, ಕಗಿಸೋ ರಬಾಡಾ, ಎಬಿ ಡಿ ವಿಲಿಯರ್ಸ್​, ಡೇಲ್​ ಸ್ಟೈನ್​

ABOUT THE AUTHOR

...view details