ಬೆಂಗಳೂರು: ರಾಹುಲ್ ಮತ್ತು ಪಡಿಕ್ಕಲ್ ಅಬ್ಬರದ ಆಟದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದ್ದು, ಫೈನಲ್ ಪ್ರವೇಶಿಸಿದೆ.
ಛತ್ತಿಸ್ಗಢ ನೀಡಿದ 224 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ದೇವದತ್ತ ಪಡಿಕ್ಕಲ್ ಮತ್ತು ಕೆ.ಎಲ್.ರಾಹುಲ್ ಮೊದಲ ವಿಕೆಟ್ಗೆ 155 ರನ್ಗಳಸಿಸುವ ಮೂಲಕ ಭದ್ರ ಬುನಾದಿ ಹಾಕಿದ್ರು. ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡಿದ ಪಡಿಕ್ಕಲ್ ಭರ್ಜರಿ 3 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 92 ರನ್ಗಳಿಸಿ ಔಟ್ ಆದ್ರು.
ಈ ವೇಳೆ ಜೊತೆಯಾದ ಮಯಾಂಕ್ ಅಗರ್ವಾಲ್ ಮತ್ತು ರಾಹುಲ್ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು. ಅಂತಿಮವಾಗಿ ಕರ್ನಾಟಕ ತಂಡ 40 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ಜಯದ ದಡ ಮುಟ್ಟಿತು. ತಂಡದ ಪರ ದೇವದತ್ತ ಪಡಿಕ್ಕಲ್ 92, ಕೆಲ್ ರಾಹುಲ್88 , ಮಯಾಂಕ್ ಅಗರ್ವಾಲ್ 47 ರನ್ ಗಳಿಸಿದ್ರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಛತ್ತೀಸ್ಗಢ ತಂಡಕ್ಕೆ ಆರಂಭಿಕ ಅಘಾತ ಎದುರಾಯ್ತು. ಭರ್ಜರಿ ಪ್ರದರ್ಶನ ತೋರಿದ ಬೌಲರ್ಗಳು ಎದುರಾಳಿ ತಂಡ ಚೇತರಿಸಿಕೊಳ್ಳಲು ಕೂಡ ಆವಕಾಶ ನೀಡಲಿಲ್ಲ. 100 ರನ್ ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.