ಕರ್ನಾಟಕ

karnataka

ETV Bharat / sports

ಮುಂದಿನ ವಾರದಿಂದಲೇ ವಾರ್ವಿಕ್​ಷೈರ್​ ಪ್ರತಿನಿಧಿಸಲಿದ್ದಾರೆ ವಿಹಾರಿ - ವಾರ್ವಿಕ್​ಷೈರ್​ ಜೊತೆ ವಿಹಾರಿ ಒಪ್ಪಂದ

ವಿಸಾ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾದ ಪೀಟರ್​ ಮಲನ್ ಈ ವರ್ಷದ ಕೌಂಟಿ ಚಾಂಪಿಯನ್​ಶಿಪ್​ನಿಂದ ಹೊರಗುಳಿದಿದ್ದರಿಂದ ವಾರ್ವಿಕ್​ಷೈರ್​ ತಂಡದೊಂದಿಗೆ ವಿಹಾರಿ ಒಪ್ಪಂದ ಮಾಡಿಕೊಂಡಿದ್ದಾರೆ. 27 ವರ್ಷದ ವಿಹಾರಿ ಭಾರತದ ಪರ 12 ಟೆಸ್ಟ್​ ಪಂದ್ಯಗಳಿಂದ ಒಂದು ಶತಕ ಸೇರಿದಂತೆ 32ರ ಸರಾಸರಿಯಲ್ಲಿ 624 ರನ್​ ಗಳಿಸಿದ್ದಾರೆ.

ಹನುಮ ವಿಹಾರಿ
ಹನುಮ ವಿಹಾರಿ

By

Published : Apr 8, 2021, 7:43 PM IST

ಬರ್ಮಿಂಗ್​ಹ್ಯಾಮ್​: ವಾರ್ವಿಕ್​ಷೈರ್​ ತಂಡದ ಪರ ಹನುಮ ವಿಹಾರಿ ಬುಧವಾರ ಒಪ್ಪಂದ ಮುಗಿಸಿದ್ದು, 6 ದಿನಗಳ ಕ್ವಾರಂಟೈನ್ ಮುಗಿಸುತ್ತಿದ್ದಂತೆ ಆರಂಭದಲ್ಲಿ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತೀಯ ಆಲ್​ರೌಂಡರ್​ ಮುಂದಿನ ವಾರ ನಾಟಿಂಗ್​ಹ್ಯಾಮ್​ಷೈರ್ ವಿರುದ್ಧ ಕಣಕ್ಕಿಳಿಯಲಿದ್ದಾರೆಂದು ವಾರ್ವಿಕ್​ಷೈರ್ ವಿಶ್ವಾಸ ವ್ಯಕ್ತಪಡಿಸಿದೆ.

ಹನುಮ ವಿಹಾರಿ ಇಂದು ಮಧ್ಯಾಹ್ನ ಯುಕೆಗೆ ಆಗಮಿಸಲಿದ್ದಾರೆ. ಅವರು 6 ದಿನಗಳ ಕ್ವಾರಂಟೈನ್​ ಮುಗಿಸಿ ಕೋವಿಡ್-19 ನೆಗೆಟಿವ್​ ವರದಿ ಪಡೆದ ನಂತರ ಮುಂದಿನ ವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಾಟಿಂಗ್​ಹ್ಯಾಮ್​ಷೈರ್​ ವಿರುದ್ಧದ ಪಂದ್ಯದಲ್ಲಿ ತಂಡದ ಭಾಗವಾಗಲಿದ್ದಾರೆ ಎಂದು ವಾರ್ವಿಕ್‌ಷೈರ್ ಕ್ರಿಕೆಟ್ ನಿರ್ದೇಶಕ ಪಾಲ್ ಫಾರ್ಬ್ರೇಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸಾ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾದ ಪೀಟರ್​ ಮಲನ್ ಈ ವರ್ಷದ ಕೌಂಟಿ ಚಾಂಪಿಯನ್​ಶಿಪ್​ನಿಂದ ಹೊರಗುಳಿದಿದ್ದರಿಂದ ವಾರ್ವಿಕ್​ಷೈರ್​ ತಂಡದೊಂದಿಗೆ ವಿಹಾರಿ ಒಪ್ಪಂದ ಮಾಡಿಕೊಂಡಿದ್ದಾರೆ. 27 ವರ್ಷದ ವಿಹಾರಿ ಭಾರತದ ಪರ 12 ಟೆಸ್ಟ್​ ಪಂದ್ಯಗಳಿಂದ ಒಂದು ಶತಕ ಸೇರಿದಂತೆ 32ರ ಸರಾಸರಿಯಲ್ಲಿ 624 ರನ್​ ಗಳಿಸಿದ್ದಾರೆ.

ವಿಹಾರಿ 90 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 7000ಕ್ಕೂ ಹೆಚ್ಚು ರನ್​ ಗಳಿಸಿದ್ದಾರೆ. ಬೌಲಿಂಗ್​ನಲ್ಲೂ 24 ವಿಕೆಟ್ ಪಡೆದಿದ್ದಾರೆ.

ABOUT THE AUTHOR

...view details