ನವದೆಹಲಿ:ಭಾರತದ ಸಂಪೂರ್ಣ ಕ್ರಿಕೆಟ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಲು ಕಾಯುತ್ತಿದ್ದರೆ, ಇತ್ತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹನುಮ ವಿಹಾರಿ ಕೌಂಟಿ ಕ್ರಿಕೆಟ್ ಆಡಲು ಬುಧವಾರ ಇಂಗ್ಲೆಂಡ್ಗೆ ಹಾರಿದ್ದಾರೆ.
ವಿಹಾರಿ ವಾರ್ವಿಕ್ಷೈರ್ ತಂಡದಲ್ಲಿ ಆಡಲಿದ್ದಾರೆ. ದಕ್ಷಿಣ ಆಫ್ರಿಕಾದ ಪೀಟರ್ ಮಲನ್ ವಿಸಾ ಸಮಸ್ಯೆಯಿಂದ ಇಂಗ್ಲೆಂಡ್ಗೆ ತೆರಳಲು ಸಾಧ್ಯವಾಗದಿದ್ದರಿಂದ ವಿದೇಶಿ ಆಟಗಾರನ ಸ್ಥಾನಕ್ಕೆ ವಾರ್ವಿಕ್ಷೈರ್ ಹನುಮ ವಿಹಾರಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ವಿಹಾರಿ ಕಡಿಯೆಂದರೂ 3 ಪಂದ್ಯಗಳನ್ನಾಡಲಿದ್ದಾರೆ ಎಂದು ತಿಳಿದು ಬಂದಿದೆ.