ಮುಂಬೈ (ಮಹಾರಾಷ್ಟ್ರ): ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ನಂತರ, ಭಾರತೀಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಪೃಥ್ವಿ ಶಾ ಮತ್ತು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಮುಂಬೈಗೆ ಆಗಮಿಸಿದ್ದಾರೆ.
ಆಸ್ಟ್ರೇಲಿಯದಿಂದ ಮುಂಬೈಗೆ ಆಗಮಿಸಿದ ಆಟಗಾರರು ತಮ್ಮ ಮನೆಗಳನ್ನು ತಲುಪಿದ್ದಾರೆ. 'ಆಸ್ಟ್ರೇಲಿಯಾದಿಂದ ಮರಳಿದ ಭಾರತೀಯ ಕ್ರಿಕೆಟಿಗರಿಗೆ ತಮ್ಮ ಮನೆಗಳಿಗೆ ತೆರಳಲು ಅನುಮತಿ ನೀಡಲಾಗಿದೆ, ಅವರನ್ನು ಕ್ವಾರಂಟೈನ್ ಮಾಡಿಲ್ಲ' ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.
ಆಸ್ಟ್ರೇಲಿಯಾದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ನಮ್ಮ ಆಟಗಾರರು ಮತ್ತು ತಂಡವನ್ನು ಸನ್ಮಾನಿಸುವ ಬಗ್ಗೆ ನಾವು ನಿರ್ಧರಿಸುತ್ತೇವೆ. ಆಟಗಾರರನ್ನು ಸನ್ಮಾನಿಸಲು ಇಂಗ್ಲೆಂಡ್ ಸರಣಿಯ ಮೊದಲು ಸೂಕ್ತ ಸಮಯವನ್ನು ಹುಡುಕಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವಿಜಯ್ ಪಾಟೀಲ್ ತಿಳಿಸಿದ್ದಾರೆ.