ಕರ್ನಾಟಕ

karnataka

ಅಗರ್ಕರ್​ ಜತೆ ಆಯ್ಕೆ ಸಮಿತಿ ಸ್ಥಾನಕ್ಕೆ ಕನ್ನಡಿಗನ ಫೈಟ್​​... ವೆಂಕಟೇಶ್​ ಪ್ರಸಾದ್​ ಅರ್ಜಿ!

By

Published : Jan 25, 2020, 4:32 AM IST

ಕ್ರಿಕೆಟ್​ ಮಂಡಳಿ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ವೆಂಕಟೇಶ್​ ಪ್ರಸಾದ್​ ಅರ್ಜಿ ಸಲ್ಲಿಕೆ ಮಾಡಿದ್ದು, ಇದೀಗ ತೀವ್ರ ಪೈಪೋಟಿ ಏರ್ಪಟ್ಟಿದೆ.

Venkatesh prasad
ಆಯ್ಕೆ ಸಮಿತಿ ಸ್ಥಾನಕ್ಕೆ ಅರ್ಜಿ

ಮುಂಬೈ:ಭಾರತೀಯ ಕ್ರಿಕೆಟ್​​ ಮಂಡಳಿ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇದೀಗ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಅಜಿತ್​ ಅಗರ್ಕರ್​ ಬೆನ್ನಲ್ಲೇ ಕನ್ನಡಿಗ ವೆಂಕಟೇಶ್​ ಪ್ರಸಾದ್​ ಕೂಡ ಈ ಸ್ಥಾನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಅರ್ಜಿ ಸಲ್ಲಿಕೆ ಮಾಡಲು ನಿನ್ನೆ ಕೊನೆಯ ದಿನವಾಗಿದ್ದ ಕಾರಣ ಕೊನೆ ಘಳಿಗೆಯಲ್ಲಿ ಅಜಿತ್​ ಅಗರ್ಕರ್​ ಹಾಗೂ ವೆಂಕಟೇಶ್​ ಪ್ರಸಾದ್​ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಈ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಭಾರತ ತಂಡದ ಮಾಜಿ ವೇಗದ ಬೌಲರ್​ ಆಗಿರುವ ಅಜಿತ್​ ಅಗರ್ಕರ್​​ 16 ಟೆಸ್ಟ್​​ ಪಂದ್ಯ, 191 ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಭಾಗಿಯಾಗಿದ್ದು, ಏಕದಿನ ಕ್ರಿಕೆಟ್​​ನಲ್ಲಿ ಅನಿಲ್​ ಕುಂಬ್ಳೆ, ಜಾವಗಲ್​ ಶ್ರೀನಾಥ್​ ಬಳಿಕ ಅತಿ ಹೆಚ್ಚು ವಿಕೆಟ್​ ಪಡೆದ ಮೂರನೇ ಬೌಲರ್​ ಆಗಿದ್ದಾರೆ.

ಈ ಹಿಂದೆ ಟೀಂ ಇಂಡಿಯಾ ತಂಡದ ಬೌಲಿಂಗ್​ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ ಪ್ರಸಾದ್​ ಆಯ್ಕೆಗೊಂಡಿರಲಿಲ್ಲ. ಇದೀಗ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಅರ್ಜಿ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಪರ ವೆಂಕಟೇಶ್​ ಪ್ರಸಾದ್​ ​33 ಟೆಸ್ಟ್​​ ಪಂದ್ಯಗಳಿಂದ 96 ವಿಕೆಟ್​ ಪಡೆದುಕೊಂಡಿದ್ದು, 161 ಏಕದಿನ ಪಂದ್ಯಗಳಿಂದ 196ವಿಕೆಟ್​​ ಪಡೆದುಕೊಂಡಿದ್ದಾರೆ.

ಅಗರ್ಕರ್ ಮತ್ತು ವೆಂಕಟೇಶ್​ ಪ್ರಸಾದ್​ ಅಷ್ಟೇ ಅಲ್ಲದೇ ಶಿವರಾಮಕೃಷ್ಣನ್​​, ನಯನ್ ಮೊಂಗಿಯಾ, ಚೇತನ್ ಶರ್ಮಾ, ರಾಜೇಶ್ ಚೌಹಾಣ್​ ಕೂಡಾ ಅರ್ಜಿ ಸಲ್ಲಿಸಿದ್ದಾರೆ.

ABOUT THE AUTHOR

...view details