ಲಂಡನ್: ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಭಾರತದ ಪ್ರದರ್ಶನವನ್ನು ಟೀಕಿಸಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಆಸೀಸ್ ಪ್ರವಾಸದ ಎಲ್ಲಾ ಮಾದರಿಯಲ್ಲೂ ಕೊಹ್ಲಿ ಬಳಗ ಸೋಲು ಕಾಣಲಿದೆ ಎಂದು ಭವಿಷ್ಯ ನೀಡಿದ್ದಾರೆ.
ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರಿ 66 ರನ್ಗಳಿಂದ ಸೋಲು ಕಾಣುವ ಮೂಲಕ ಸರಣಿಯಲ್ಲಿ ಹಿನ್ನಡೆ ಸಾಧಿಸಿದೆ.
" ಇದು ಮುಂಚಿನ ಕರೆಯಾಗಬಹುದು ... ಆದರೂ ಭಾರತ ತಂಡ ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ ಸ್ವರೂಪದ ಸರಣಿಯಲ್ಲಿ ಸುಲಭವಾಗಿ ಸೋಲು ಕಾಣುತ್ತದೆ ಎಂದು ನಾನು ಭಾವಿಸಿದ್ದೇನೆ" ಎಂದು ವಾನ್ ಶುಕ್ರವಾರ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
ಭಾರತದ ಈ ತಂಡ 5 ಬೌಲರ್ಗಳ ಜೊತೆ ಕಣಕ್ಕಿಳಿಯುವ ಮೂಲಕ ಹಳೆಯ ಶಾಲೆಯ ಮನಸ್ಥಿತಿಯನ್ನು ಹೊಂದಿರುವಂತೆ ಕಾಣಿಸುತ್ತಿದೆ. ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಕೆಳ ಕ್ರಮಾಂಕದ ವರೆಗೆ ಬ್ಯಾಟಿಂಗ್ ಬಲ ಕಾಣಿಸುತ್ತಿಲ್ಲ. ಇನ್ನು ಫೀಲ್ಡಿಂಗ್ ಮತ್ತು ಬೌಲಿಂಗ್ ಪ್ರದರ್ಶನ ಅತ್ಯಂತ ಸಾಧಾರಣವಾಗಿತ್ತು ಎಂದು ಅವರು ಟ್ವೀಟ್ ಮೂಲಕ ಭಾರತ ತಂಡದ ಪ್ರದರ್ಶನವನ್ನು ಟೀಕಿಸಿದ್ದಾರೆ.