ದುಬೈ: ಜಂಟಲ್ ಮ್ಯಾನ್ ಕ್ರೀಡೆ ಎಂದೇ ಹೆಸರಾದ ಕ್ರಿಕೆಟ್ ಇಂದು ವಿಶ್ವವನ್ನೆಲ್ಲಾ ಆವರಿಸಿಕೊಳ್ಳುತ್ತಿದೆ. ಇಷ್ಟು ವರ್ಷಗಳ ಕಾಲ ಕ್ರಿಕೆಟ್ ಕಡೆಗೆ ಗಮನ ಕೊಡದ ಡೆನ್ಮಾರ್ಕ್, ಜಪಾನ್, ಅಮೆರಿಕದಂತಹ ರಾಷ್ಟ್ರಗಳು ಕ್ರಿಕೆಟ್ಗೆ ನಿಧಾನವಾಗಿ ಒಗ್ಗಿಕೊಳ್ಳುತ್ತಿವೆ.
ಹೌದು, ಕ್ರಿಕೆಟ್ ಏಷ್ಯಾದ ಬಹುಪಾಲು ರಾಷ್ಟ್ರಗಳು, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾದ ಕೆಲವೇ ರಾಷ್ಟ್ರಗಳು ಮಾತ್ರ ಶತಮಾನಗಳಿಂದಲೂ ಕ್ರಿಕೆಟ್ ಆಡಿಕೊಂಡು ಬರುತ್ತಿವೆ ಇದೀಗ ಎಲ್ಲಾ ಕ್ರೀಡೆಗಳಲ್ಲಿ ತಕ್ಕಮಟ್ಟಿನ ಪ್ರಾಬಲ್ಯ ಹೊಂದಿರುವ ಅಮೆರಿಕ ತಂಡ ಇದೀಗ ಕ್ರಿಕೆಟ್ಗೂ ಎಂಟ್ರಿಕೊಟ್ಟಿದ್ದು, ಅದರಲ್ಲೂ ಎರಡು ದಶಕಗಳಿಗೂ ಕ್ರಿಕೆಟ್ನಲ್ಲಿ ಪಳಗಿರುವ ತಂಡಗಳಿಗೆ ಸೋಲುಣಿಸಿದೆ. ಅದರಲ್ಲೂ 2019-2022ರ ಐಸಿಸಿ ಕ್ರಿಕೆಟ್ ವಿಶ್ವ ಕಪ್ ಲೀಗ್ 2ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಅಮೆರಿಕ,ಯುಎಇ ಹಾಗೂ ಸ್ಕಾಟ್ಲೆಂಡ್ ನಡುವೆ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಅಮೆರಿಕ ತಂಡ ಸತತ ಎರಡು ಪಂದ್ಯಗಳಲ್ಲಿ ಸ್ಕಾಟ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಗೆಲುವು ಸಾಧಿಸಿ ಕ್ರಿಕೆಟ್ ಜಗತ್ತಿಗೆ ಪುಟ್ಟ ಪುಟ್ಟ ಹೆಜ್ಜೆಯನ್ನಿಡಲು ಆರಂಭಿಸಿದೆ.
ಭಾರತೀಯ ಮೂಲದ ಸೌರಭ್ ನೆಟ್ರವಾಲ್ಕರ್ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಅಮೆರಿಕ ತಂಡ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು 3 ವಿಕೆಟ್ ಬಗ್ಗಬಡಿದಿತ್ತು, ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು 35 ರನ್ಗಳಿಂದ ಮಣಿಸುವ ಮೂಲಕ ಅನುಭವಿಗಳಿಗೆ ಶಾಕ್ ನೀಡಿದೆ.
ಒಟ್ಟಿನಲ್ಲಿ ಕ್ರಿಕೆಟ್ ಆಟವನ್ನು ಬೇಡ ಎಂದು ಕೊಂಡಿದ್ದ ಅಮೆರಿಕನ್ನರು ಮತ್ತೆ ಕ್ರಿಕೆಟ್ನತ್ತ ಹೆಜ್ಜೆಯಿಟ್ಟಿದ್ದಾರೆ. ಅದರಲ್ಲೂ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಾ ಹೊರಟಿರುವುದು ಅಮೆರಿಕನ್ನರಿಗೆ ಮಾತ್ರವಲ್ಲ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳಿಗೂ ಸಂತಸ ತಂದಿರುವುದು ಸುಳ್ಳಲ್ಲ.