ಮುಂಬೈ: ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಪುರುಷ ಕ್ರಿಕೆಟಿಗರು ಕೋಟಿಗಟ್ಟಲೆ ಹಣ ಪಡೆಯುತ್ತಿದ್ದಾರೆ. ಆದರೆ, ಮಹಿಳಾ ಕ್ರಿಕೆಟಿಗರು ಮಾತ್ರ ಗರಿಷ್ಠ ₹50 ಲಕ್ಷ ಪಡೆಯುತ್ತಿರುವುದಕ್ಕೆ ಭಾರತ ತಂಡದ ಸ್ಟಾರ್ ಆಟಗಾರ್ತಿ ಮಂದಾನ ಬಿಸಿಸಿಐ ವೇತನ ನೀತಿಯಿಂದ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ.
ವರ್ಷದ ಐಸಿಸಿ ಕ್ರಿಕೆಟರ್ ಪ್ರಶಸ್ತಿ ಪಡೆದಿರುವ ಸ್ಮೃತಿ ಮಂದಾನ ಇತ್ತೀಚೆಗೆ ಬಿಸಿಸಿಐ ಘೋಷಣೆ ಮಾಡಿರುವ ವಾರ್ಷಿಕ ಗುತ್ತಿಗೆಯಲ್ಲಿ ಪುರುಷ ಕ್ರಿಕೆಟಿಗರಿಗೆ ಕೋಟಿಗಟ್ಟಲೆ ಹಣ ನೀಡುತ್ತಿದೆ. ಮಹಿಳಾ ಕ್ರಿಕೆಟಿಗರಿಗೆ ಇನ್ನೂ ಲಕ್ಷಗಳಲ್ಲೇ ವೇತನ ನೀಡುತ್ತಿರುವುದರ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
"ವೇತನದ ಬಗ್ಗೆ ಮಾತನಾಡುವ ಮೊದಲು ಪುರುಷ ಕ್ರಿಕೆಟ್ನಿಂದ ಬರುತ್ತಿರುವ ಆದಾಯವೆಷ್ಟು, ಮಹಿಳಾ ಕ್ರಿಕೆಟ್ನಿಂದ ಬರುವ ಆದಾಯವೆಷ್ಟು ಎಂದು ತಿಳಿದುಕೊಳ್ಳಬೇಕು. ಮಹಿಳೆಯರ ಕ್ರಿಕೆಟ್ನಿಂದ ಆದಾಯ ಬರುವಂತಾದರೆ ವೇತನದ ಬಗ್ಗೆ ಧ್ವನಿಯೆತ್ತುವ ಮೊದಲ ಮಹಿಳೇ ನಾನಾಗಿರುತ್ತೇನೆ. ಸದ್ಯದ ಪರಿಸ್ಥಿರಿಯಲ್ಲಿ ಪುರುಷರಿಗೆ ನೀಡುವಷ್ಟು ಹಣವನ್ನು ನಮಗೂ ನೀಡಿ ಎಂದು ಹೇಳಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.