ಪೊಚೆಫ್‌ಸ್ಟ್ರೂಮ್: 4 ಬಾರಿಯ ಚಾಂಪಿಯನ್ ಭಾರತ ತಂಡ ಮಂಗಳವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ.
ಸತತ ಮೂರು ವಿಶ್ವಕಪ್ಗಳಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ ಸತತ ಎರಡನೇ ಬಾರಿ ಸೆಮಿಫೈನಲ್ ಪ್ರವೇಶಿಸಿರುವ ಪಾಕ್ ತಂಡದ ವಿರುದ್ಧ ಫೈನಲ್ ಪಂದ್ಯಕ್ಕಾಗಿ ಮಂಗಳವಾರ ಸೆಣಸಾಡಲಿದೆ.
ಟೂರ್ನಿಯಲ್ಲಿ ಸೋಲನ್ನೇ ಕಾಣದ ಎರಡು ತಂಡಗಳು ಇದೇ ಮುಖಾಮುಖಿಯಾಗುತ್ತಿವೆ. ಆದರೆ ಭಾರತ ತಂಡ ಶ್ರೀಲಂಕಾ ,ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ನಂತಹ ತಂಡಗಳನ್ನು ಸೋಲಿಸಿದ್ದರೆ, ಪಾಕ್ ಜಿಂಬಾಬ್ವೆ, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ತಂಗಳನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಎರಡು ತಂಡಗಳು ಬೌಲಿಂಗ್ ಘಟಕ ಉತ್ತಮವಾಗಿದೆ. ಆದರೆ ಭಾರತದ ಬ್ಯಾಟಿಂಗ್ ಮಾತ್ರ ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿದ್ದು ಸೆಮಿಫೈನಲ್ನಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.
ವಿಶ್ವಕಪ್ ಮುಖಾಮುಖಿ:
ಎರಡು ತಂಡಗಳು ವಿಶ್ವಕಪ್ನಲ್ಲಿ 9 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಪಾಕಿಸ್ತಾನ 5ಬಾರಿ ಗೆದ್ದಿದ್ದರೆ, ಭಾರತ ತಂಡ 4 ಬಾರಿ ಗೆಲುವಿ ಸಾಧಿಸಿದೆ. ಆದರೆ ಕಳೆದ ಮೂರು ವಿಶ್ವಕಪ್ಗಳಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸಿದೆ. 2018ರ ಸೆಮಿಫೈನಲ್ನಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ತಂಡ ಬರೋಬ್ಬರಿ 203 ರನ್ಗಳಿಂದ ಮಣಿಸಿ ಫೈನಲ್ ಪ್ರವೃಶಿಸಿತ್ತು. ಈಗಾಗಿ ಈ ಪಂದ್ಯದಲ್ಲೂ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡ ಎನ್ನಲಾಗುತ್ತಿದೆ.
ಭಾರತ ಅಂಡರ್ 19 ತಂಡ
ಯಶಸ್ವಿ ಜೈಸ್ವಾಲ್, ದಿವ್ಯಾನ್ಶ್ ಸಕ್ಸೇನಾ, ತಿಲಕ್ ವರ್ಮಾ, ಪ್ರಿಯಾಮ್ ಗರ್ಗ್ (ನಾಯಕ), ಧ್ರುವ್ ಜುರೇಲ್ (ವಿಕೆಟ್ ಕೀಪರ್), ಸಿದ್ಧೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ವಿದ್ಯಾಧರ್ ಪಾಟಿಲ್, ಶುಭಾಂಗ್ ಹೆಗ್ಡೆ, ಶಾಶ್ವತ್ ರಾವತ್, ಕುಮಾರ್ ಕುಶಾಗ್ರ.
ಪಾಕಿಸ್ತಾನ ಅಂಡರ್ 19 ತಂಡ:
ಹೈದರ್ ಅಲಿ, ಮೊಹಮ್ಮದ್ ಹುರೈರಾ, ರೋಹೈಲ್ ನಜೀರ್ (ವಿಕೆ/ನಾಯಕ), ಫಹಾದ್ ಮುನೀರ್, ಖಾಸಿಮ್ ಅಕ್ರಮ್, ಮೊಹಮ್ಮದ್ ಹ್ಯಾರಿಸ್, ಇರ್ಫಾನ್ ಖಾನ್, ಅಬ್ಬಾಸ್ ಅಫ್ರಿದಿ, ತಾಹಿರ್ ಹುಸೇನ್, ಅಮೀರ್ ಅಲಿ, ಮೊಹಮ್ಮದ್ ಅಮೀರ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ಅಬ್ದುಲ್ ಬಂಗಲ್ಜೈ, ಮೊಹಮ್ಮದ್ ಶಹಝಾದ್, ಆರಿಶ್ ಅಲಿ ಖಾನ್.