ಹೋವ್: 19ರ ವಯೋಮಿತಿ ಒಳಗಿನ ಭಾರತ, ಇಂಗ್ಲೆಂಡ್ ಹಾಗೂ ಬಾಂಗ್ಲದೇಶಗಳನ್ನೊಳಗೊಂಡ ತ್ರಿಕೋನ ಸರಣಿಯನ್ನು ಭಾರತ ತಂಡ ಜಯಿಸಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕಿರಿಯರ ತಂಡ ಬಾಂಗ್ಲಾದೇಶ ತಂಡವನ್ನು 6 ವಿಕೆಟ್ಗಳಿಂದ ಮಣಿಸುವ ಮೂಲಕ ಟ್ರೋಫಿ ಎತ್ತಿ ಹಿಡಿಯಿತು.

ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾದೇಶ ತಂಡ ಆರಂಭಿಕ ಬ್ಯಾಟ್ಸ್ಮನ್ ಪರ್ವೇಜ್ ಹೊಸೈನ್ 60 ಹಾಗೂ ಮಹ್ಮದುಲ್ ಹಸನ್ ರಾಯ್ರ 109 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 261 ರನ್ ಗಳಿಸಿತ್ತು.
ಭಾರತದ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕಾರ್ತಿಕ್ ತ್ಯಾಗಿ 2, ಸುಶಾಂತ್ ಮಿಶ್ರಾ 2, ರವಿ ಬಿಷೋನಿ ಹಾಗೂ ಶುಬಾಂಗ್ ಹೆಗ್ಡೆ ತಲಾ ಒಂದು ವಿಕೆಟ್ ಪಡೆದಿದ್ದರು.
261 ರನ್ಗಳ ಟಾರ್ಗೆಟ್ ಪಡೆದ ಭಾರತ ಯುವ ಪಡೆ 48.4 ಓವರ್ಗಳಲ್ಲಿ ಗುರಿ ತಲುಪಿತು. ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ 50, ದಿವ್ಯಾನ್ಸ್ ಸಕ್ಷೇನಾ 55, ನಾಯಕ ಪ್ರಿಯಂ ಗರ್ಗ್ 73, ದ್ರುವ್ ಜುರೆಲ್ ಔಟಾಗದೆ 59 ಹಾಗೂ ತಿಲಕ್ ವರ್ಮಾ ಔಟಾಗದೆ 16 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.