ಮುಂಬೈ:ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ 21 ದಿನಗಳ ಲಾಕ್ಡೌನ್ ಆದೇಶ ಹೊರಡಿಸಲಾಗಿದ್ದು, ಇದರಿಂದ ಲಕ್ಷಾಂತರ ಜನರು ತೊಂದರೆಗೊಳಗಾಗಿದ್ದು ಮಾತ್ರ ಸುಳ್ಳಲ್ಲ.
ಕೊರೊನಾ ಭೀತಿಯಿಂದಾಗಿ ಕ್ರಿಕೆಟ್ ಟೂರ್ನಿಗಳು ಮುಂದೂಡಿಕೆಯಾಗಿದ್ದು, ಇದರಿಂದ ಸ್ಥಳೀಯ, ದೇಶೀಯ ಅಂಪೈರ್, ಸ್ಕೋರ್ ಬೋರ್ಡ್ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡುವ ಮೂಲಕ ಇವರು ತಮ್ಮ ಸಂಬಳ ಪಡೆದುಕೊಳ್ಳುತ್ತಿದ್ದರು. ಆದರೆ, ಇದೀಗ ಎಲ್ಲ ರೀತಿಯ ಕ್ರೀಡಾ ಟೂರ್ನಿ ಬ್ಯಾನ್ ಆಗಿದ್ದರಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ.