ಕರ್ನಾಟಕ

karnataka

ETV Bharat / sports

ಎಲ್‌ಬಿಡಬ್ಲ್ಯೂ ಮೇಲ್ಮನವಿ ವಿಚಾರದಲ್ಲಿ ಕೊಂಚ ಬದಲಾವಣೆ : ಐಸಿಸಿ - ಸ್ಮಾರ್ಟ್​ ಸಿಗ್ನಲ್

ಕ್ರಿಕೆಟ್ ಸಮಿತಿಯು ಅಂಪೈರ್ ಕರೆ ಬಗ್ಗೆ ಅತ್ಯುತ್ತಮ ಚರ್ಚೆ ನಡೆಸಿತು. ಅದರ ಬಳಕೆ ವ್ಯಾಪಕವಾಗಿ ವಿಶ್ಲೇಷಿಸಿದೆ..

ಐಸಿಸಿ
ICC

By

Published : Apr 2, 2021, 2:28 PM IST

ದುಬೈ: ವಿವಾದಾತ್ಮಕ 'ಅಂಪೈರ್ಸ್ ಕರೆ'(ಸ್ಮಾರ್ಟ್​ ಸಿಗ್ನಲ್​) ನಿರ್ಧಾರ ವಿಮರ್ಶೆ ವ್ಯವಸ್ಥೆಯ ಒಂದು ಭಾಗವಾಗಿ ಮುಂದುವರಿಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗುರುವಾರ ತೀರ್ಪು ನೀಡಿದೆ. ಆದರೆ, ಪ್ರಸ್ತುತ ಡಿಆರ್‌ಎಸ್ ಪ್ರೋಟೋಕಾಲ್‌ಗಳಲ್ಲಿ ಕೆಲ ಬದಲಾವಣೆಗಳನ್ನು ಪರಿಚಯಿಸಿದೆ.

ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಇದನ್ನು "ಗೊಂದಲ" ಎಂದು ಕರೆಯುತ್ತಾರೆ. 'ಅಂಪೈರ್ ಕರೆ' ಈಗ ಸ್ವಲ್ಪ ಸಮಯದವರೆಗೆ ವಿವಾದದ ವಿಷಯವಾಗಿದೆ. "ಕ್ರಿಕೆಟ್ ಸಮಿತಿಯು ಅಂಪೈರ್ ಕರೆ ಬಗ್ಗೆ ಅತ್ಯುತ್ತಮ ಚರ್ಚೆ ನಡೆಸಿತು. ಅದರ ಬಳಕೆ ವ್ಯಾಪಕವಾಗಿ ವಿಶ್ಲೇಷಿಸಿದೆ" ಎಂದು ಐಸಿಸಿಯ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಮತ್ತು ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಬುಧವಾರ ಮಂಡಳಿ ಸಭೆ ಮುಗಿದ ಬಳಿಕ ತಿಳಿಸಿದ್ದಾರೆ.

ಡಿಆರ್‌ಎಸ್ ಪ್ರೋಟೋಕಾಲ್‌ಗಳಲ್ಲಿನ ಈಗಿನ ನಿಯಮ :ಎಲ್‌ಬಿಡಬ್ಲ್ಯು ಮೇಲ್ಮನವಿ ಸಲ್ಲಿಸಿದಾಗ ಚೆಂಡು ಬೇಲ್ಸ್‌ಗಳ ಕೆಳಭಾಗಕ್ಕೆ ತಾಗುತ್ತಿದ್ದರೆ ಅಂಪೈರ್ಸ್ ಕಾಲ್‌ ವ್ಯಾಪ್ತಿಗೆ ಒಳಪಡುತ್ತದೆ ಎಂದಿದೆ. ಆದರೆ, ಈ ನಿಯಮವನ್ನು ಬದಲಿಸಲಾಗಿದೆ. ಬೇಲ್ಸ್‌ನ ಮೇಲ್ಭಾಗಕ್ಕೆ ತಗುಲಲಿದೆ ಎಂದು ಖಾತ್ರಿಯಾದರೂ ಅಂಪೈರ್ಸ್‌ ಕಾಲ್‌ ವ್ಯಾಪ್ತಿಗೆ ಸೇರಿಸಲು ಐಸಿಸಿ ನಿರ್ಧರಿಸಿದೆ.

ABOUT THE AUTHOR

...view details