ದುಬೈ:ಕಳೆದ 15 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ವಿಭಾಗದಲ್ಲೂ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾ ಬ್ರೂಸ್ ಆಕ್ಸೆನ್‌ಫೋರ್ಡ್ ತಮ್ಮ ಅಂಪೈರ್ ವೃತ್ತಿಗೆ ಗುರುವಾರ ವಿದಾಯ ಹೇಳಿದ್ದಾರೆ.
"ತೀರ್ಪುಗಾರನಾಗಿ ವೃತ್ತಿಜೀವನವನ್ನು ಒಮ್ಮೆ ಹಿಂತಿರುಗಿ ನೋಡಿದಾಗ, ನಾನು 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಪ್ರತಿನಿಧಿಸಿದ್ದೆ ಎಂಬುದನ್ನು ನನ್ನಿಂದಲೇ ನಂಬಲಾಗುತ್ತಿಲ್ಲ. ಅಂಪೈರಿಂಗ್ ಪಯಣ ಆರಂಭಿಸಿದಾಗ ಇಷ್ಟೊಂದು ಸುದೀರ್ಘ ವೃತ್ತಿಜೀವನವನ್ನು ಹೊಂದುವ ಭರವಸೆಯಿರಲಿಲ್ಲ ಎಂದು ಹೇಳಿರುವ ಆಕ್ಸೆನ್‌ಫೋರ್ಡ್, ಇಷ್ಟು ವರ್ಷಗಳ ಕಾಲ ತಮ್ಮ ಬೆಂಬಲಿಸಿದ ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.