ಕರ್ನಾಟಕ

karnataka

By

Published : Oct 13, 2019, 7:22 PM IST

ETV Bharat / sports

ಎಲ್ಲರಿಗೂ ಅವಕಾಶ ಸಿಗೋದಿಲ್ಲ, ಸಿಕ್ಕ ಅವಕಾಶ ಬಿಡಬಾರದಷ್ಟೇ.. ಉಮೇಶ್​ ಯಾದವ್​

ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿ ನಂತರ ಬೆನ್ನುನೋವಿಗೆ ತುತ್ತಾಗಿರುವ ವೇಗಿ ಜಸ್ಪ್ರಿತ್ ಬುಮ್ರಾ ಜಾಗಕ್ಕೆ ಉಮೇಶ್​ ಆಯ್ಕೆಯಾಗಿದ್ದರು. ಮೊದಲ ಟೆಸ್ಟ್​ನಲ್ಲಿ ಬೆಂಚ್​ ಕಾದಿದ್ದ ಅವರು ಎರಡನೇ ಟೆಸ್ಟ್​ನಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡರಲ್ಲದೆ ಎರಡೂ ಇನ್ನಿಂಗ್ಸ್​ನಲ್ಲೂ ತಲಾ ಮೂರು ವಿಕೆಟ್​ ಪಡೆದು ಕೊಹ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ.

Umesh Yadav

ಪುಣೆ: ಭಾರತ ತಂಡದ ಸ್ಟಾರ್​ ವೇಗಿ ಜಸ್ಪ್ರೀತ್​ ಬೂಮ್ರಾ ಗಾಯಗೊಂಡ ಹಿನ್ನೆಲೆ ಅವಕಾಶ ಪಡೆದಿದ್ದ ಉಮೇಶ್ ಯಾದವ್​ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಸ್ಥಾನ ಬದ್ರಪಡಿಸಿಕೊಂಡಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿ ನಂತರ ಬೆನ್ನುನೋವಿಗೆ ತುತ್ತಾಗಿರುವ ವೇಗಿ ಜಸ್ಪ್ರಿತ್ ಬೂಮ್ರಾ ಜಾಗಕ್ಕೆ ಉಮೇಶ್​ ಆಯ್ಕೆಯಾಗಿದ್ದರು. ಮೊದಲ ಟೆಸ್ಟ್​ನಲ್ಲಿ ಬೆಂಚ್​ ಕಾದಿದ್ದ ಅವರು ಎರಡನೇ ಟೆಸ್ಟ್​ನಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡರಲ್ಲದೆ ಎರಡೂ ಇನ್ನಿಂಗ್ಸ್​ನಲ್ಲೂ ತಲಾ ಮೂರು ವಿಕೆಟ್​ ಪಡೆದು ಕೊಹ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ.

ಪಂದ್ಯ ಗೆಲುವಿನ ಬಳಿಕ ಮಾತನಾಡಿದ ಉಮೇಶ್​, ಈ ಪಂದ್ಯದಲ್ಲಿ ನಾನು ಪಡೆದ ವಿಕೆಟ್​ ಸಹಾಗೆ ಸಲ್ಲಬೇಕು, ಆ ಎರಡು ಎಸೆತಗಳೂ ಬೌಂಡರಿ ಸೇರುತ್ತವೆ ಎಂದುಕೊಂಡಿದ್ದೆ, ಅದೃಷ್ಟವಶಾತ್​ ಸಹಾ ಅದ್ಭುತವಾಗಿ ಜಂಪ್​ ಮಾಡಿ ಕ್ಯಾಚ್​ ಪಡೆದರು ಎಂದು ಸಹಾ ವಿಕೆಟ್​ ಕೀಪಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲೆ ಅವರಿಗೆ ಟ್ರೀಟ್​ ಕೊಡಿಸುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ..

ಇನ್ನು, ತಂಡದಲ್ಲಿ ಅವಕಾಶ ಸಿಕ್ಕಬಗ್ಗೆ ಮಾತನಾಡಿ, ತಂಡದಲ್ಲಿ ಆರೋಗ್ಯಕರ ಸ್ಪರ್ಧೆಯಿದೆ. ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ನಾನು ನನಗೆ ಸಿಕ್ಕ ಅವಕಾಶಗಳಲ್ಲಿ ನನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಹಾಗೂ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಬಯಸುತ್ತೇನೆ. ಭಾರತದ ಪಿಚ್​ಗಳಲ್ಲಿ ನಾನು ಉತ್ತಮವಾಗಿ ಬೌಲಿಂಗ್ ಮಾಡುವ ಆತ್ಮವಿಶ್ವಾಸವಿತ್ತು. ಯಾಕೆಂದರೆ, ಕಳೆದ ವರ್ಷ ವೆಸ್ಟ್​ ಇಂಡೀಸ್​ ವಿರುದ್ಧದ ಕೊನೆಯ ಪಂದ್ಯದಲ್ಲಿ 10 ವಿಕೆಟ್​ ಪಡೆದಿದ್ದೆ. ಅದೇ ಆತ್ಮವಿಶ್ವಾಸದಲ್ಲಿ ಬೌಲಿಂಗ್​ ಮಾಡಿ ಯಶಸ್ವಿಯಾದೆ ಎಂದು ಯಾದವ್​ ತಿಳಿಸಿದ್ದಾರೆ.

ABOUT THE AUTHOR

...view details