ಕರ್ನಾಟಕ

karnataka

ETV Bharat / sports

ಅತಿ ಹೆಚ್ಚು ಬಾರಿ 40ಕ್ಕೂ ಹೆಚ್ಚು ರನ್​ ಬಿಟ್ಟುಕೊಟ್ಟ ಕೆಟ್ಟದಾಖಲೆಗೆ ಪಾತ್ರರಾದ ಉಮೇಶ್ ಯಾದವ್​ - ಹೈದರಾಬಾದ ಹಾಗೂ ಬೆಂಗಳೂರು ಲೈವ್​

ಉಮೇಶ್​ ಯಾದವ್ 120 ಪಂದ್ಯಗಳಲ್ಲಿ 17 ಬಾರಿ 40 ಕ್ಕೂ ಹೆಚ್ಚು ರನ್​ ಬಿಟ್ಟುಕೊಟ್ಟಿದ್ದಾರೆ. ಇವರನ್ನು​ ಹೊರೆತುಪಡಿಸಿದರೆ ಭಾರತದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ 16 ಬಾರಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ನ ಆಲ್​ರೌಂಡರ್​ ಡ್ವೇನ್ ಬ್ರಾವೋ 16 ಬಾರಿ 40ಕ್ಕೂ ಹೆಚ್ಚು ರನ್​ ಬಿಟ್ಟುಕೊಟ್ಟಿದ್ದಾರೆ.

ಉಮೇಶ್ ಯಾದವ್​
ಉಮೇಶ್ ಯಾದವ್​

By

Published : Sep 22, 2020, 12:14 AM IST

ದುಬೈ: ಸನ್​ರೈಸರ್ಸ್​ ವಿರುದ್ಧದ ದುಬೈನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಉಮೇಶ್​ ಯಾದವ್ ಬೇಡದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

13ನೇ ಆವೃತ್ತಿಯಲ್ಲಿ ಇಂದೇ ಮೊದಲ ಪಂದ್ಯದಲ್ಲಿ ಆಡುತ್ತಿರುವ ಆರ್​ಸಿಬಿ ಮೊದಲು ಬ್ಯಾಟಿಂಗ್ ನಡೆಸಿ 5 ವಿಕೆಟ್​ ಕಳೆದುಕೊಂಡು 163 ರನ್​ಗಳಿಸಿತ್ತು.

ಚೇಸಿಂಗ್​ ವೇಳೆ ಮೊದಲ ಓವರ್​ನಲ್ಲೇ 12 ರನ್​ ಬಿಟ್ಟುಕೊಟ್ಟಿದ್ದ ಉಮೇಶ್ ಯಾದವ್​ ಡೇವಿಡ್​ ವಾರ್ನರ್​ ರನ್​ಔಟ್​ ಮಾಡಿದ್ದರು. ಆದರೆ ಮುಂದಿನ 3 ಓವರ್​ಗಳಲ್ಲೂ 10ಕ್ಕಿಂತ ಹೆಚ್ಚು ರನ್​ ಬಿಟ್ಟುಕೊಟ್ಟರು. ಒಟ್ಟಾರೆ 4 ಓವರ್​ಗಳ ಕೋಟಾದಲ್ಲಿ ವಿಕೆಟ್​ ಇಲ್ಲದೆ 48 ರನ್​ ಬಿಟ್ಟುಕೊಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 40 ಪ್ಲಸ್​ ರನ್​ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾದರು.

ಉಮೇಶ್​ ಯಾದವ್ 120 ಪಂದ್ಯಗಳಲ್ಲಿ 17 ಬಾರಿ 40 ಕ್ಕೂ ಹೆಚ್ಚು ರನ್​ ಬಿಟ್ಟುಕೊಟ್ಟಿದ್ದಾರೆ. ಇವರನ್ನು​ ಹೊರೆತುಪಡಿಸಿದರೆ ಭಾರತದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ 16 ಬಾರಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ನ ಆಲ್​ರೌಂಡರ್​ ಡ್ವೇನ್ ಬ್ರಾವೋ 16 ಬಾರಿ 40ಕ್ಕೂ ಹೆಚ್ಚು ರನ್​ ಬಿಟ್ಟುಕೊಟ್ಟಿದ್ದಾರೆ.

ಇನ್ನು ಧಾರುಣವಾದ ವಿಚಾರವೆಂದರೆ ಹೈದರಾಬಾದ್​ ವಿರುದ್ಧ ಕಳೆದ 4 ಪಂದ್ಯಗಳಿಂದ ಉಮೇಶ್ ಯಾದವ್​ ಒಂದು ವಿಕೆಟ್​ ಪಡೆಯದೇ, 31, 47, 46 ಮತ್ತು 48 ರನ್​ ಚಚ್ಚಿಸಿಕೊಂಡಿದ್ದಾರೆ.

ABOUT THE AUTHOR

...view details