ಇಂದೋರ್:ಪ್ರವಾಸಿ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ತಂಡದ ಮೇಲೆ ಕೊಹ್ಲಿ ಪಡೆ ಗದಾ ಪ್ರಹಾರ ನಡೆಸಿದ್ದು, 2ನೇ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಕೆ ಮಾಡಿರುವ ತಂಡ 343 ರನ್ಗಳ ಮುನ್ನಡೆ ಪಡೆದುಕೊಂಡಿದೆ.
12 ರನ್ಗಳಿಸಿದ್ದ ವೃದ್ಧಿಮಾನ್ ಸಹಾ ವಿಕೆಟ್ ಬೀಳುತ್ತಿದ್ದಂತೆ ಮೈದಾನಕ್ಕಿಳಿದ ಉಮೇಶ್ ಯಾದವ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಅಬ್ಬರ ತೋರಿಸಿದ್ದು, ತಾವು ಎದುರಿಸಿರುವ 10 ಎಸೆತಗಳಲ್ಲಿ 3 ಸಿಕ್ಸರ್, ಒಂದು ಬೌಂಡರಿ ಸೇರಿ ಬರೋಬ್ಬರಿ 25ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.