ಕರ್ನಾಟಕ

karnataka

ETV Bharat / sports

ಉಮೇಶ್​ ಯಾದವ್ 3ನೇ ಕ್ರಮಾಂಕದಲ್ಲೂ ಬ್ಯಾಟಿಂಗ್​ ಮಾಡಬಲ್ಲರು: ವಿರಾಟ್​ ಕೊಹ್ಲಿ - ​ ವಿರಾಟ್​ ಕೊಹ್ಲಿ ಉಮೇಶ್​ ಯಾದವ್​

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕೊಹ್ಲಿ, ಉಮೇಶ್​ ಯಾದವ್​ ಬೌಲಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲೂ ಉತ್ತಮ ಸ್ಥಿರತೆ ಕಾಯ್ದುಕೊಳ್ತಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Umesh Yadav batting
Umesh Yadav batting

By

Published : Dec 1, 2019, 5:01 PM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ವೇಗಿ ಉಮೇಶ್​ ಯಾದವ್ 3ನೇ ಕ್ರಮಾಂಕದಲ್ಲೂ ಬ್ಯಾಟಿಂಗ್ ನಡೆಸಬಲ್ಲರು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕೊಹ್ಲಿ, ಗಾಯಗೊಂಡ ಬುಮ್ರಾ ಜಾಗದಲ್ಲಿ ಸ್ಥಾನ ಪಡೆದುಕೊಂಡಿದ್ದ ಉಮೇಶ್​ ಯಾದವ್​ ಆಡಿರುವ 5 ಟೆಸ್ಟ್​ ಪಂದ್ಯಗಳಿಂದ 23 ವಿಕೆಟ್​ ಪಡೆದು ಮಿಂಚಿದ್ದಾರೆ. ಅದರಲ್ಲೂ ಬಾಂಗ್ಲಾದೇಶದ ವಿರುದ್ಧ ಐತಿಹಾಸಿಕ ಡೇ ಆ್ಯಂಡ್​ ನೈಟ್​ ಪಂದ್ಯದಲ್ಲಿ 5 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಉಮೇಶ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 23.1 ಸ್ಟ್ರೈಕ್​ ರೇಟ್​ ಹೊಂದುವ ಮೂಲಕ ಉತ್ತಮ ಬೌಲರ್​ ಎನಿಸಿಕೊಂಡಿದ್ದಾರೆ ಎಂದರು.

ಯಾದವ್​ ಕೇವಲ ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವುದಲ್ಲದೇ ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಇದಕ್ಕೆ ವಿರಾಟ್​ ಕೊಹ್ಲಿ ಸಹಾ ಫಿದಾ ಆಗಿದ್ದು, ಉಮೇಶ್​ರನ್ನು ಮೂರನೇ ಕ್ರಮಾಂಕದಲ್ಲಿ ಪಿಂಚ್​ ಹಿಟ್ಟರ್​ ಆಗಿ ಆಡಿಸಬಹುದು ಎಂದು ಹೇಳಿದ್ದಾರೆ.

ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಅಶ್ವಿನ್​ ಅಥವಾ ಜಡೇಜರಲ್ಲಿ ಒಬ್ಬರಿಗೆ ಅವಕಾಶ ನೀಡಿ 4 ವೇಗಿಗಳೊಂದಿಗೆ ಕಣಕ್ಕಿಳಿದರೆ ಉಮೇಶ್​ರನ್ನು ಆಲ್​ರೌಂಡರ್​ ಆಗಿ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ ಉಮೇಶ್​ ಬ್ಯಾಟಿಂಗ್ ಅಬ್ಬರ​ ನೋಡಿದರೆ 3ನೇ ಕ್ರಮಾಂದಲ್ಲಿ ಕಣಕ್ಕಿಳಿಸಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ರು.

ಉಮೇಶ್​ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಕೇವಲ 10 ಎಸೆತಗಳಲ್ಲಿ 31 ರನ್​ಗಳಿಸಿ ವಿಶ್ವದಾಖಲೆ ಬರೆದಿದ್ದರು. 10 ಎಸೆತಗಳನ್ನೆದುರಿಸಿ 300 ಕ್ಕೂ ಹೆಚ್ಚು ಸ್ಟ್ರೈಕ್​ರೇಟ್​ನಲ್ಲಿ 30 ಕ್ಕೂ ಹೆಚ್ಚು ರನ್​ಗಳಿಸಿದ ಮೊದಲ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು. ಇದಕ್ಕೂ ಮೊದಲು ಕಿವೀಸ್​ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ 11 ಎಸೆತಗಳಲ್ಲಿ 31 ರನ್​ ಗಳಿಸಿದ್ದು ದಾಖಲೆಯಾಗಿತ್ತು.

ABOUT THE AUTHOR

...view details