ಕರಾಚಿ :ಪಿಸಿಬಿ ಉಮರ್ ಅಕ್ಮಲ್ ಮೇಲೆ ಏರಿದ್ದ 3 ವರ್ಷದ ಶಿಕ್ಷೆ 18 ತಿಂಗಳಿಗೆ ಇಳಿಕೆಯಾಗಿದೆ. ಈ ವರ್ಷದ ಆರಂಭದಲ್ಲಿ ಬುಕ್ಕಿಗಳಿಂದ ಭ್ರಷ್ಟಾಚಾರದ ಒತ್ತಡ ಬಂದಿದ್ದರೂ ಅದನ್ನು ವರದಿ ಮಾಡಲು ವಿಫಲವಾಗಿದ್ದಕ್ಕೆ ಉಮರ್ ಅಕ್ಮಲ್ ಅವರ ಮೂರು ವರ್ಷಗಳ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧಿಸಲಾಗಿತ್ತು.
ಇಂದು ವಿಚಾರಣೆ ನಡಿಸಿದ ಇಂಡಿಪೆಂಡೆಂಟ್ ಅಡ್ಜುಡಿಕೇಟರ್ ಫಕೀರ್ ಮೊಹಮ್ಮದ್ ಖೋಖರ್ ಉಮರ್ ಅಕ್ಮಲ್ ಮೇಲಿನ ನಿಷೇಧದ ಶಿಕ್ಷೆಯನ್ನು 3ರಿಂದ ಒಂದೂವರೆ ವರ್ಷಕ್ಕೆ ಕಡಿತಗೊಳಿಸಿದ್ದಾರೆ. ಅವರ ಪ್ರಸ್ತುತ ನಿಷೇಧದ ಅವಧಿ ಫೆಬ್ರವರಿ 2020ರಿಂದ ಅಗಸ್ಟ್ 2011ರವರೆಗಿರಲಿದೆ. ಆದರೆ, ನಿಷೇಧದ ಅವಧಿಯನ್ನು ಇನ್ನೂ ಕಡಿತಗೊಳಿಸುವಂತೆ ಕೋರಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ 30 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ತಿಳಿಸಿದ್ದಾರೆ.