ಲಾಹೋರ್:ಹಲವು ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದ ಪಾಕಿಸ್ತಾನ ತ ತಂಡದ ಉಮರ್ ಅಕ್ಮಲ್ ಸತತ ಎರಡು ಪಂದ್ಯಗಳಲ್ಲಿ ಡಕ್ಔಟ್ ಆಗುವ ಮೂಲಕ ಕಳಪೆ ದಾಖಲೆಗೆ ಭಾಜನರಾಗಿದ್ದಾರೆ.
ಸೋಮವಾರ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಅವರು ಮೊದಲನೇ ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ 10 ಬಾರಿ ಡಕ್ ಔಟ್ ಆಗಿದ್ದ ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಷಾನ್ ಅವರ ಜೊತೆಗೆ ಬೇಡದ ದಾಖಲೆಗೆ ಉಮರ್ ಅಕ್ಮಲ್ ಪಾತ್ರರಾಗಿದ್ದಾರೆ. ಅಲ್ಲದೆ ಮೊದಲ ಬಾಲಿನಲ್ಲೇ 6 ಬಾರಿ ಡಕ್ಔಟ್ ಆಗಿರುವ ದಾಖಲೆಯೂ ಉಮರ್ ಪಾಲಾಗಿದೆ.