ಕರಾಚಿ:ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಉಮರ್ ಅಕ್ಮಲ್ ತಮ್ಮ ಮೇಲೆ ಪಿಸಿಬಿ ಹೇರಿರುವ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ಗೂ ಮುನ್ನ ಮ್ಯಾಚ್ ಫಿಕ್ಸಿಂಗ್ ಮಾಡಲು ಬುಕ್ಕಿಯೊಬ್ಬರು ಸಂಪರ್ಕಿಸಿದ್ದ ವಿಚಾರವನ್ನು ಪಿಸಿಬಿ ಗಮನಕ್ಕೆ ತರದೇ ಇರುವುದಕ್ಕೆ ಶಿಷ್ಟಾಚಾರ ಉಲ್ಲಂಘನೆಯಡಿ ಉಮರ್ ಅಕ್ಮಲ್ರನ್ನು 3 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧಿಸಲಾಗಿತ್ತು.
ಉಮರ್ ಅಕ್ಮಲ್ ತಮ್ಮ ಪರ ವಾದಿಸುವುದಕ್ಕೆ ಪ್ರಧಾನಿ ಇಮ್ರಾನ್ ಖಾನ್ ಅವರ ಸಂಸದೀಯ ವ್ಯವಹಾರಗಳ ಸಲಹೆಗಾರರಾಗಿರುವ ಬಾಬರ್ ಅವಾನ್ ಅವರ ನೆರವು ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅದೇ ಮಾಧ್ಯಮ ಈ ಪ್ರಕರಣದ ವಿಚಾರಣೆಗಾಗಿ ಸಮಿತಿಯೊಂದನ್ನು ರಚಿಸಿದೆ ಎಂದು ತಿಳಿಸಿದೆ.
ಹಿರಿಯ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಸಹೋದರರಾಗಿರುವ ಉಮರ್ ಅಕ್ಮಲ್ ಪಾಕಿಸ್ತಾನ ಪರ 16 ಟೆಸ್ಟ್, 121 ಏಕದಿನ ಪಂದ್ಯ ಹಾಗೂ 84 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 1003 ರನ್, 3194ರನ್ ಹಾಗೂ 1690 ರನ್ ಗಳಿಸಿದ್ದಾರೆ.