ಕರ್ನಾಟಕ

karnataka

ETV Bharat / sports

ಐಪಿಎಲ್​ ನಡೆಸಲು ನಾವು ಸಿದ್ಧ ಎಂದ ಯುಎಇ... ಅವಕಾಶ ನೀಡುವುದೇ ಬಿಸಿಸಿಐ?

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ ಟೂರ್ನಿ​ ನಡೆಸಲು ತಾನು ಸಿದ್ಧವಿರುವುದಾಗಿ ಯುಎಇ ಹೇಳಿದೆ.

ಐಪಿಎಲ್​ ನಡೆಸಲು ನಾವು ಸಿದ್ಧ ಎಂದ ಯುಎಇ
ಐಪಿಎಲ್​ ನಡೆಸಲು ನಾವು ಸಿದ್ಧ ಎಂದ ಯುಎಇ

By

Published : May 10, 2020, 1:47 PM IST

ನವದೆಹಲಿ:ದಿನದಿಂದ ದಿನಕ್ಕೆ ಭಾರತದಲ್ಲಿ ಕೊರೊನಾ ರೌದ್ರನರ್ತನವಾಡುತ್ತಿದ್ದು, ಹೀಗಾಗಿ ಮುಂದಿನ ಕೆಲ ತಿಂಗಳ ಕಾಲ ಭಾರತದಲ್ಲಿ ಯಾವುದೇ ಕ್ರೀಡಾಕೂಟ ನಡೆಯುವುದು ಬಹುತೇಕ ಸಂದೇಹ. ಇದೇ ಕಾರಣಕ್ಕಾಗಿ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಟೂರ್ನಿ ಕೂಡ ಮುಂದೂಡಿಕೆಯಾಗಿದೆ.

ಮಾರ್ಚ್​​ 29ರಿಂದ ಆರಂಭಗೊಳ್ಳಬೇಕಾದ ಪ್ರಸಕ್ತ ಸಾಲಿನ 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಟೂರ್ನಿ ಕೊರೊನಾ ವೈರಸ್​ ಭೀತಿಯಿಂದಾಗಿ ಮುಂದೂಡಿಕೆಯಾಗಿದ್ದು, ಇಲ್ಲಿಯವರೆಗೆ ಮರುವೇಳಾಪಟ್ಟಿ ಕೂಡ ನಿಗದಿಯಾಗಿಲ್ಲ. ಹೀಗಾಗಿ ಇದರ ಉಪಯೋಗ ಪಡೆದುಕೊಳ್ಳಲು ಮುಂದಾಗಿರುವ ಯುಎಇ ಈ ಸಲದ ಐಪಿಎಲ್​ ನಡೆಸಲು ನಾವು ಸಿದ್ಧ ಎಂದಿದೆ.

ಇಂಡಿಯನ್​ ಪ್ರೀಮಿಯರ್​​ ಲೀಗ್​​

ಈಗಾಗಲೇ ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ ಕೂಡ ಐಪಿಎಲ್​​ ನಡೆಸಲು ಸಿದ್ಧ ಎಂದು ಹೇಳಿದ್ದು, ಇದೀಗ ದುಬೈ ಕೂಡ ಟೂರ್ನಿ ನಡೆಸಲು ಮುಂದೆ ಬಂದಿದೆ. ಆದರೆ ಇದಕ್ಕ ಸಂಬಂಧಿಸಿದಂತೆ ಬಿಸಿಸಿಐ ಯಾವುದೇ ಉತ್ತರ ಹೊರಹಾಕಿಲ್ಲ. ಬಿಸಿಸಿಐ ಖಂಜಾಚಿ ಆಗಿರುವ ಅರುಣ್​ ದುಮ್ಲಾ ಇದರ ಬಗ್ಗೆ ಮಾತನಾಡಿದ್ದು, ಯುಎಇ ಕೂಡ ಟೂರ್ನಿ ನಡೆಸಲು ಮುಂದೆ ಬಂದಿದೆ ಎಂದಿದೆ. ಆದರೆ ವಿದೇಶಗಳಿಗೂ ಹೋಗಲು ಈಗಾಗಲೇ ಎಲ್ಲ ವಿಮಾನ ಬ್ಯಾನ್​ ಮಾಡಿರುವ ಕಾರಣ ಇದು ಅಸಾಧ್ಯ ಎಂದಿದೆ.

ಈ ಹಿಂದೆ 2009 ಹಾಗೂ 2014ರ ವೇಳೆ ವಿದೇಶಗಳಲ್ಲಿ ಬಿಸಿಸಿಐ ಐಪಿಎಲ್​ ನಡೆಸಿದೆ. ಈ ಸಲ ಕೂಡ ಅಂತಹ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಬೇರೆ ಬೇರೆ ದೇಶಗಳಿಂದ ಪ್ಲೇಯರ್ಸ್​​ ಅಲ್ಲಿಗೆ ಬರಬೇಕಾದ ಕಾರಣ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಮಾತು ಕೇಳಿ ಬರುತ್ತಿವೆ.

ಐಪಿಎಲ್​​​​​​​​​​​​ ನಡೆಸುವ ಬಗ್ಗೆ ಚಿಂತನೆ ನಡೆಸಿಲ್ಲ: ಬಿಸಿಸಿಐ

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ದಿನಾಂಕ ಮರು ನಿಗದಿ ಪಡಿಸುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯಲ್ಲೂ ನಾವು ಚಿಂತನೆ ನಡೆಸಿಲ್ಲ. ದೇಶದಲ್ಲಿನ ಲಾಕ್​ಡೌನ್​ ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ಇದರ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಮೊಹಮ್ಮದ್​ ಶಮಿ, ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಮೆಂಟ್​ ನಡೆಯುವುದು ಅನುಮಾನ​ ಎಂದು ಹೇಳಿದ್ದರು. ದೇಶದಲ್ಲಿ ಕೋವಿಡ್​ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಟೂರ್ನಿ ನಡೆಸುವುದು ಹೇಗೆ ಎಂಬ ಗೊಂದಲ ಬಿಸಿಸಿಐನಲ್ಲಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಾಂಚೈಸಿಗಳ ಜತೆ ಮಾತುಕತೆ ನಡೆಸಿರುವ ಬಿಸಿಸಿಐ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ABOUT THE AUTHOR

...view details