ಪೋಚೆಫ್ಸ್ಟಾರ್ಮ್: ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ಮೊದಲು ಬ್ಯಾಟಿಂಗ್ ನಡೆಸಲು ತೀರ್ಮಾನಿಸಿದೆ.
4 ಬಾರಿಯ ಚಾಂಪಿಯನ್ ಭಾರತ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನದ ವಿರುದ್ಧ ದಶಕದಿಂದ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದು, ಈ ಬಾರಿಯೂ ಅದನ್ನು ಮುಂದುವರಿಸುವ ಆಲೋಚನೆಯಲ್ಲಿದೆ. 2008ರಿಂದ ನಡೆದಿರುವ ಮೂರು ಪಂದ್ಯಗಳಲ್ಲೂ ಭಾರತ ತಂಡವೇ ಗೆಲುವು ಸಾಧಿಸಿದೆ.
ಇನ್ನು 2018ರ ಸೆಮಿಫೈನಲ್ನಲ್ಲಿ ಭಾರತ ವಿರುದ್ಧ 203ರನ್ಗಳ ಬೃಹತ್ ಅಂತರದಲ್ಲಿ ಸೋಲು ಕಂಡಿರುವ ಪಾಕಿಸ್ತಾನ ಇಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ಕಾತುರದಿಂದ ಕಾಯುತ್ತಿದೆ.