ಪಾಟ್‌ಶೆಫ್‌ಸ್ಟ್ರೂಮ್: ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ದುಕೊಂಡಿದೆ.
ಭಾರತ ತಂಡ ತನ್ನ ಸೆಮಿಫೈನಲ್ನಲ್ಲಿ ಕಣಕ್ಕಿಳಿಸಿದ್ದ ತಂಡವನ್ನೇ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಸುತ್ತಿದೆ.
7ನೇ ಬಾರಿ ಫೈನಲ್ ಪ್ರವೇಶಿಸಿರುವ ಭಾರತ ತಂಡ ಈ ಪಂದ್ಯವನ್ನು ಗೆದ್ದು 5ನೇ ವಿಶ್ವಕಪ್ಗೆ ಎತ್ತಿ ಹಿಡಿಯುವ ಆಲೋಚನೆಯಲ್ಲಿದೆ. ಇತ್ತ ಚೊಚ್ಚಲ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿರುವ ಬಾಂಗ್ಲಾದೇಶ ಕೂಡ ಚೊಚ್ಚಲ ಟ್ರೋಫೀ ಮೇಲೆ ಕಣ್ಣಿಟ್ಟಿದೆ.
ಅಂಡರ್-19 ವಿಶ್ವಕಪ್ನಲ್ಲಿ ಭಾರತ ಮತ್ತು ಬಾಂಗ್ಲಾ 4 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ 3 ಮತ್ತು ಬಾಂಗ್ಲಾ ಒಂದು ಬಾರಿ ಗೆಲುವು ಸಾಧಿಸಿದೆ. ಅಂಕಿ ಅಂಶಗಳ ಪ್ರಕಾರ, ಭಾರತ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದ್ದರೂ, ಟೂರ್ನಿಯಲ್ಲಿ ಅಜೇಯ ದಾಖಲೆ ಹೊಂದಿರುವ ಬಾಂಗ್ಲಾ ತಂಡವನ್ನು ಕಡೆಗಣಿಸುವಂತಿಲ್ಲ.
ಭಾರತ ತಂಡ: ಯಶಸ್ವಿ ಜೈಸ್ವಾಲ್, ದಿವ್ಯಾನ್ಶ್ ಸಕ್ಸೇನಾ, ತಿಲಕ್ ವರ್ಮಾ, ಪ್ರಿಯಂ ಗರ್ಗ್ (ನಾಯಕ), ಧ್ರುವ್ ಜುರೆಲ್ (ಕೀಪರ್), ಸಿದ್ದೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಷ್ನೋಯ್, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ಶಾಶ್ವತ್ ರಾವತ್
ಬಾಂಗ್ಲಾದೇಶ ತಂಡ: ಪರ್ವೇಜ್ ಹೊಸೈನ್ ಎಮನ್, ತಾಂಜಿದ್ ಹಸನ್, ಮಹಮುದುಲ್ ಹಸನ್ ಜಾಯ್, ಟೌಹಿದ್ ಹ್ರಿದೋಯ್, ಶಹಾದತ್ ಹೊಸೈನ್, ಅಕ್ಬರ್ ಅಲಿ (ನಾಯಕ/ ಕೀಪರ್), ಅವಿಶೇಕ್ ದಾಸ್, ಶಮಿಮ್ ಹೊಸೈನ್, ರಕಿಬುಲ್ ಹಸನ್, ಶೋರಿಫುಲ್ ಇಸ್ಲಾಂ, ತಂಜಿಮ್ ಹಸನ್ ಸಕಿಬ್