ಲಾಹೋರ್(ಪಾಕಿಸ್ತಾನ):ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಕಳೆದ ಮೂರು ತಿಂಗಳಿಂದ ವಿಶ್ವಾದ್ಯಂತ ಯಾವುದೇ ಮಾದರಿಯ ಕ್ರಿಕೆಟ್ ನಡೆದಿಲ್ಲ. ಕ್ರಿಕೆಟ್ ಜನಕ ರಾಷ್ಟ್ರ ಇಂಗ್ಲೆಂಡ್ ದೀರ್ಘಕಾಲದ ವಿರಾಮದ ನಂತರ ಟೆಸ್ಟ್ ಸರಣಿಯನ್ನು ಬಯೋ ಸೆಕ್ಯೂರ್ ತಾಣದಲ್ಲಿ ಆಯೋಜಿಸುತ್ತಿದೆ.
ಜುಲೈ 8ರಿಂದ ಇಂಗ್ಲೆಂಡ್ ಮತ್ತು ವಿಂಡೀಸ್ ತಂಡದ ನಡುವಿನ ಟೆಸ್ಟ್ ಸರಣಿ ಆಯೋಜನೆಗೊಳ್ಳಲಿದೆ. ಈ ಸರಣಿಯ ನಂತರ ಪಾಕಿಸ್ತಾನದ ವಿರುದ್ಧ 3 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಪಿಸಿಬಿ, 29 ಮಂದಿಯ ತಂಡವನ್ನು ಘೋಷಿಸಿದ್ದು, ಈ ತಂಡದಲ್ಲಿ ಪಾಕಿಸ್ತಾನ ಅಂಡರ್- 19 ತಂಡದ ಆಟಗಾರ ಹೈದರ್ ಅಲಿ ಸ್ಥಾನ ಪಡೆದಿದ್ದಾರೆ.
ಹೈದರ್ ಅಲಿ 2019ರ ಸೀಸನ್ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಹಾಗಾಗಿ ಅವರಿಗೆ ಪಿಸಿಬಿ ಅವಕಾಶ ಕಲ್ಪಿಸಿದೆ. ಅಲ್ಲಿದೆ ಅವರು ಪಿಸಿಬಿ ವಾರ್ಷಿಕ ಗುತ್ತಿಗೆಯಲ್ಲೂ ಅವಕಾಶ ಪಡೆದಿದ್ದಾರೆ.