ಬ್ಲೂಮ್‌ಫಾಂಟೈನ್:ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನಲ್ಲಿ ಭಾರತ ಕಿರಿಯರ ತಂಡ ಜಪಾನ್ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಪಂದ್ಯದ ನಂತರ ಎರಡೂ ತಂಡದ ಆಟಗಾರರು ಒಟ್ಟಿಗೆ ಫೋಟೋಗೆ ಪೋಸ್ ಕೊಡುವ ಮೂಲಕ ಕ್ರೀಡಾಪ್ರೇಮ ಮೆರೆದರು.
ಕ್ರಿಕೆಟ್ಗೆ ಈಗಷ್ಟೇ ಅಂಬೆಗಾಲಿಟ್ಟಿರುವ ಜಪಾನ್ ಯಾವುದೇ ಹಂತದಲ್ಲೂ ಭಾರತ ತಂಡಕ್ಕೆ ಸವಾಲಾಗಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ನಲ್ಲಿ ಕೇವಲ 41ಕ್ಕೆ ಆಲೌಟಾಯಿತು. ಈ ಮೊತ್ತವನ್ನು ಭಾರತ ತಂಡ 4.5 ಓವರ್ಗಳಲ್ಲಿ ತಲುಪಿ 10 ವಿಕೆಟ್ಗಳ ಗೆಲುವು ಸಾಧಿಸಿತು.
ಜಪಾನ್ ಈ ಪಂದ್ಯವನ್ನು ಸೋತಿರುವುದು ದೊಡ್ಡ ವಿಚಾರವಲ್ಲ. ಆದರೆ, ಕ್ರಿಕೆಟ್ ಆಟವನ್ನು ಕಲಿತ ಕೆಲವೇ ವರ್ಷಗಳಲ್ಲಿ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿರುವುದೇ, ಅವರಲ್ಲಿರುವ ಕ್ರಿಕೆಟ್ ಪ್ರೇಮ ಹಾಗೂ ಕ್ರಿಕೆಟ್ ಮೇಲಿನ ಬದ್ದತೆಗೆ ಸಾಕ್ಷಿ. ಆದ್ದರಿಂದಲೇ ಟೀಮ್ ಇಂಡಿಯಾ ಆಟಗಾರರು ಜಪಾನ್ ಆಟಗಾರರೊಂದಿಗೆ ಒಟ್ಟಿಗೆ ಪೋಟೋ ತೆಗೆಸಿಕೊಂಡು ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡಿದ್ದಾರೆ.
ಕಳೆದ ವರ್ಷ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಭಾರತದೆದುರು ಹೀನಾಯವಾಗಿ ಸೋತಿತ್ತು. ಪಂದ್ಯ ಮುಗಿದ ನಂತರ ಪ್ರಶಸ್ತಿ ಸ್ವೀಕರಿಸುವ ವೇಳೆ ಭಾರತ ತಂಡದ ನಾಯಕನಾಗಿದ್ದ ರಹಾನೆ ಅಫ್ಘನ್ ಆಟಗಾರರನ್ನು ಫೋಟೋ ಸೆಷನ್ಗೆ ಆಹ್ವಾನಿಸಿ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದರು.