ಮರಟುವಾ(ಶ್ರೀಲಂಕಾ): ಕಿರಿಯರ ಏಷ್ಯಾ ಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು 60 ರನ್ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ 2ನೇ ಜಯ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 305 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್ಮನ್ ಅರ್ಜುನ್ ಅಜಾದ್ (121) ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ತಿಲಕ್ ವರ್ಮಾ (110) ಭರ್ಜರಿ ಶತಕಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅರ್ಜುನ್ 111 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 11 ಬೌಂಡರಿ ಗಳಿಸಿದರೆ, ತಿಲಕ್ 119 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.
ಪಾಕ್ ಪರ ನಸೀಮ್ ಶಾ 3, ಅಬ್ಬಾಸ್ ಅಫ್ರಿದಿ 3, ಅಮೀರ್ ಅಲಿ ಹಾಗೂ ಮೊಹಮ್ಮದ್ ಅಮೀರ್ ತಲಾ ಒಂದು ವಿಕೆಟ್ ಪಡೆದರು.