ಕರ್ನಾಟಕ

karnataka

ETV Bharat / sports

ವಯಸ್ಸಿನ ವಂಚನೆ: U-19 ವಿಶ್ವಕಪ್​ ಹಿರೋಗೆ ವರ್ಷ ಕಾಲ ನಿಷೇಧ ಹೇರಿದ ಬಿಸಿಸಿಐ! - U-19 ವಿಶ್ವಕಪ್​ ಹಿರೋ ಮಂಜೋತ್​ ಕಲ್ರಾ

ವಯಸ್ಸಿನ ವಂಚನೆಯಿಂದಾಗಿ ಟೀಂ ಇಂಡಿಯಾದ ಉದಯೋನ್ಮುಖ ಆಟಗಾರನೊಬ್ಬನ ಮೇಲೆ ಬಿಸಿಸಿಐ ಇದೀಗ ನಿಷೇಧ ಹೇರಿ ಆದೇಶ ಹೊರಹಾಕಿದೆ.

U-19 World Cup hero Manjot Kalra
ಆರಂಭಿಕ ಆಟಗಾರ ಮಂಜೋತ್​ ಕಲ್ರಾ

By

Published : Jan 1, 2020, 11:09 PM IST

ಮುಂಬೈ:2018ರ ಅಂಡರ್​​-19 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಪ್ರಶಸ್ತಿಗೆ ಮುತ್ತಿಕ್ಕಲು ಪ್ರಮುಖ ಕಾರಣವಾಗಿದ್ದ ಪ್ರತಿಭಾನ್ವಿತ ಕ್ರಿಕೆಟಿಗ ಆರಂಭಿಕ ಆಟಗಾರ ಮಂಜೋತ್​ ಕಲ್ರಾ ಇದೀಗ ವಯಸ್ಸಿನ ವಂಚನೆಯಿಂದಾಗಿ ವರ್ಷಗಳ ನಿಷೇಧದ ಬಿಸಿ ಎದುರಿಸುವಂತಾಗಿದೆ.

ಎಡಗೈ ಆರಂಭಿಕ ಬ್ಯಾಟ್ಸ್​​ಮನ್​​ ಆಗಿರುವ ಮಂಜೋತ್​ ಕಲ್ರಾ ರಣಜಿ ಕ್ರಿಕೆಟ್​​ ಆಡುವುದರಿಂದ ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ಭಾರತೀಯ ಕ್ರಿಕೆಟ್​ ಮಂಡಳಿ ಪ್ರಕಾರ ಅವರ ವಯಸ್ಸು 20 ವರ್ಷ 351 ದಿನ. ಕಳೆದ ವಾರ ಮಂಜೋತ್​​ ಕಲ್ರಾ ಡೆಲ್ಲಿಯಲ್ಲಿ ಅಂಡರ್​​-23 ಕ್ರಿಕೆಟ್​​ನಲ್ಲಿ ಭಾಗಿಯಾಗಿ ಬೆಂಗಾಲ್​ ವಿರುದ್ಧ 80 ರನ್​ಗಳಿಕೆ ಮಾಡಿದ್ದರು. ಆದರೆ ಇದೀಗ ರಣಜಿ ಕ್ರಿಕೆಟ್​​ನಲ್ಲಿ ಶಿಖರ್​ ಧವನ್​ ಅವರ ಸ್ಥಾನವನ್ನ ಈ ಪ್ಲೇಯರ್​ ತುಂಬಬೇಕಾಗಿತ್ತು. ಆದರೆ, ಬಿಸಿಸಿಐ ನಿಷೇಧ ಹೇರಿರುವ ಕಾರಣ ವರ್ಷಗಳ ಕಾಲ ರಣಜಿ ಕ್ರಿಕೆಟ್​​ನಿಂದ ಹೊರಗುಳಿಯಲಿದ್ದಾರೆ.

ಅಂಡರ್​-16 ಹಾಗೂ ಅಂಡರ್​​-19 ಕ್ರಿಕೆಟ್​ ವೇಳೆ ವಯಸ್ಸಿನ ವಂಚನೆ ಮಾಡಿರುವ ಆರೋಪ ಇವರ ಮೇಲೆ ಕೇಳಿ ಬಂದಿದೆ.

ಸದ್ಯ ಮತ್ತೊಬ್ಬ ಅಂಡರ್​​-19 ಹೀರೋ ಶಿವಂ ಮಾವಿ ಕೇಸ್​ ಸಹ ಬಿಸಿಸಿಐ ಮುಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಉತ್ತರಪ್ರದೇಶದ ಪರ ಈ ಪ್ಲೇಯರ್​ ಆಡುತ್ತಿದ್ದಾರೆ.

ABOUT THE AUTHOR

...view details