ಅಬುದಾಬಿ: ಯುಎಇ ತಂಡದ ಇಬ್ಬರು ಕ್ರಿಕೆಟ್ ಆಟಗಾರರಿಗೆ ಕೊರೊನಾ ವೈರಸ್ ತಗುಲಿರುವುದು ಕನ್ಫರ್ಮ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಕ್ರಿಕೆಟ್ ಮಂಡಳಿ ಮಾಹಿತಿ ಪ್ರಕಟಿಸಿದೆ.
ಉಪನಾಯಕ ಸೇರಿ ಯುಎಇ ತಂಡದ ಇಬ್ಬರು ಕ್ರಿಕೆಟ್ ಪ್ಲೇಯರ್ಸ್ಗೆ ಕೊರೊನಾ - UAE cricket players
ಯುಎಇ ಕ್ರಿಕೆಟ್ ತಂಡದ ಇಬ್ಬರು ಕ್ರಿಕೆಟ್ ಪ್ಲೇಯರ್ಸ್ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ಅವರನ್ನ ಐಸೋಲೇಷನ್ಗೆ ಒಳಪಡಿಸಲಾಗಿದೆ.
ಐರ್ಲೆಂಡ್ ವಿರುದ್ಧ ಯುಎಇ ತಂಡ ಇಂದು ಮೊದಲ ಏಕದಿನ ಪಂದ್ಯದಲ್ಲಿ ಭಾಗಿಯಾಗಿದ್ದು, ಇದರ ಬೆನ್ನಲ್ಲೇ ಇಬ್ಬರು ಆಟಗಾರರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ತಂಡದ ಉಪನಾಯಕ ಚಿರಾಗ್ ಸುರಿ ಹಾಗೂ ಆರ್ಯನ್ ಲಾಕ್ರಾಗೆ ಕೊರೊನಾ ಸೋಂಕು ತಗುಲಿದೆ.ಇಬ್ಬರು ಪ್ಲೇಯರ್ಸ್ಗೆ ಸದ್ಯ ಐಸೋಲೇಷನ್ನಲ್ಲಿ ಇಡಲಾಗಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದೆ. ಪಂದ್ಯದಲ್ಲಿ ಭಾಗಿಯಾಗಿರುವ ಎಲ್ಲ ಪ್ಲೇಯರ್ಸ್ಗಳಿಗೂ ಈಗಾಗಲೇ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಅವರ ವರದಿ ನೆಗಟಿವ್ ಬಂದಿದೆ.
ಉಭಯ ತಂಡಗಳ ನಡುವೆ ಈಗಾಗಲೇ ಮೊದಲ ಏಕದಿನ ಪಂದ್ಯ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ. ಹೀಗಾಗಿ ಮುಂದಿನ ಪಂದ್ಯಗಳು ನಡೆಯುವ ಬಗ್ಗೆ ಅನುಮಾನ ಶುರುವಾಗಿದೆ.