ಕೊಲಂಬೊ:ಶ್ರೀಲಂಕಾ ಕ್ರಿಕೆಟ್ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚುತ್ತಿದ್ದಾರೆ. ನಿನ್ನೆ ಚೆನ್ನೈ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದ್ದ ಈ ಬೌಲರ್ ಕೆಲವೇ ಗಂಟೆಗಳಲ್ಲಿ ಇನ್ನೊಂದು ಪಂದ್ಯದಲ್ಲಿ ಭಾಗಿಯಾಗಿದ್ದಾರೆ.
12 ಗಂಟೆಯಲ್ಲಿ ಎರಡು ಪಂದ್ಯ: ಒಂದರಲ್ಲಿ 3ವಿಕೆಟ್, ಇನ್ನೊಂದರಲ್ಲಿ 7ವಿಕೆಟ್ ಉರುಳಿಸಿದ ಮಲಿಂಗಾ! - ಐಪಿಎಲ್
ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ದೇಶಿಯ ಏಕದಿನ ಪಂದ್ಯದಲ್ಲಿ ಭಾಗಿಯಾಗಿದ್ದ ಮಲಿಂಗಾ 9.5 ಓವರ್ಗಳಲ್ಲಿ 49ರನ್ ನೀಡಿ ಪ್ರಮುಖ 7ವಿಕೆಟ್ ಪಡೆದು ಮಿಂಚಿದ್ದಾರೆ.
ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ದೇಶಿಯ ಏಕದಿನ ಪಂದ್ಯದಲ್ಲಿ ಭಾಗಿಯಾಗಿದ್ದ ಮಲಿಂಗಾ 9.5 ಓವರ್ಗಳಲ್ಲಿ 49ರನ್ ನೀಡಿ ಪ್ರಮುಖ 7ವಿಕೆಟ್ ಪಡೆದು ಮಿಂಚಿದ್ದಾರೆ. ಇದು ದೇಶಿಯ ಕ್ರಿಕೆಟ್ನಲ್ಲಿ ಮಲಿಂಗಾ ನೀಡಿರುವ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ. ನಿನ್ನೆ ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧದ ಪಂದ್ಯ ಮುಗಿಯುತ್ತಿದ್ದಂತೆ ಲಂಕಾದತ್ತ ಪ್ರಯಾಣ ಬೆಳೆಸಿದ್ದ ಮಲಿಂಗಾ, ಗಾಲೆ ತಂಡದ ಪರ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಎದುರಾಳಿ ತಂಡ ಕ್ಯಾಂಡಿ ವಿರುದ್ಧ ಬರೋಬ್ಬರಿ 156ರನ್ಗಳ ಗೆಲುವು ದಾಖಲಿಸಿದೆ. ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಗಾಲೆ ತಂಡ 255ರನ್ ಗಳಿಸಿತ್ತು.
ಎರಡು ಪಂದ್ಯ ಆಡಲು ಕಾರಣ
ಐಪಿಎಲ್ನಲ್ಲಿ ಭಾಗಿಯಾಗುವುದಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಲ್ಲಿನ ಆಟಗಾರರಿಗೆ ಖಡಕ್ ವಾರ್ನಿಂಗ್ ನೀಡಿತ್ತು. ಮುಂಬರುವ ವಿಶ್ವಕಪ್ನಲ್ಲಿ ಭಾಗಿಯಾಗಬೇಕಾದರೆ ದೇಶಿ ಕ್ರಿಕೆಟ್ನಲ್ಲಿ ಭಾಗಿಯಾಗಬೇಕಾಗಿರುವುದು ಕಡ್ಡಾಯ ಎಂದು ತಿಳಿಸಿತ್ತು. ಹೀಗಾಗಿ ಐಪಿಎಲ್ನಲ್ಲಿ ಮಲಿಂಗಾ ಭಾಗಿಯಾಗಿದ್ದರೂ ದೇಶಿಯ ಕ್ರಿಕೆಟ್ ಆಡುವುದು ಅನಿವಾರ್ಯವಾಗಿದೆ. ಇನ್ನು ಮಲಿಂಗಾ ದೇಶಿ ಕ್ರಿಕೆಟ್ನಲ್ಲಿ ಭಾಗಿಯಾಗಿರುವ ವಿಚಾರವನ್ನ ಮುಂಬೈ ಇಂಡಿಯನ್ಸ್ ಕೂಡ ತನ್ನ ಟ್ವಿಟ್ಟರ್ನಲ್ಲಿ ಬರೆದುಕೊಂಡಿದೆ.