ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅಮಿತ್ ಬಂಡಾರಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕ್ರಿಕೆಟರ್ ಅನುಜ್ ಧೇಡಾ ಮತ್ತು ಆತನ ಸಹೋದರ ನರೇಶ್ ಬಂಧಿತ ಆರೋಪಿಗಳು. ಅಂಡರ್-23 ತಂಡಕ್ಕೆ ತನ್ನನ್ನ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಅನುಜ್ ಧೇಡಾ ಮತ್ತು ಆತನ ಜೊತೆ ಬಂದಿದ್ದ 10 ರಿಂದ 15 ಜನ ಯುವಕರು ದೆಹಲಿ ಹಾಗೂ ಆಯ್ಕೆ ಸಮಿತಿಯ ಜಿಲ್ಲಾ ಕ್ರಿಕೆಟ್ನ ಅಸೋಷಿಯೇಷನ್ ಚೇರ್ಮನ್ ಅಮಿತ್ ಬಂಡಾರಿ ಮೇಲೆ ನಡೆಸಿದ್ದರು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಿತ್ ಬಂಡಾರಿ ಅವರನ್ನ ಭೇಟಿ ಮಾಡಿ ಮಾತನಾಡಿದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರಜತ್ ಶರ್ಮಾ, ಘಟನೆ ಸಂಬಂಧ ದೆಹಲಿ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ. ಆರೋಪಿಗಳು ಯಾರೇ ಆಗಿದ್ದರು ಅವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ತಿಳಿಸಿದ್ದಾರೆ. ಇನ್ನು ಅಮಿತ್ ಬಂಡಾರಿ ಆರೋಗ್ಯವಾಗಿದ್ದು, ಶೀಘ್ರದಲ್ಲೆ ಗುಣಮುಖರಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆಯನ್ನ ಖಂಡಿಸಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.