ಮುಂಬೈ: ಬಿಸಿಸಿಐ ಗುರುವಾರ ಆಟಗಾರರ ಕೇಂದ್ರ ಗುತ್ತಿಗೆಯನ್ನು ಪ್ರಕಟಿಸಿದ್ದು ಅದರಲ್ಲಿ ಯುವ ವಿಕೆಟ್ ಕೀಪರ್ಗೆ ಎ ಗ್ರೇಡ್ ನೀಡಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.
2017 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಪಂತ್ 2018 ಹಾಗೂ 2019ರಲ್ಲಿ ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ನಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕಗಳಿಸಿದ ಅವರು ಭವಿಷ್ಯದ ಉತ್ತಮ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಧೋನಿ ಸ್ಥಾನ ತುಂಬಬಲ್ಲ ಆಟಗಾರರ ಎಂದೆಲ್ಲಾ ಕರೆಸಿಕೊಂಡಿದ್ದರು.
ಆದರೆ ಧೋನಿ ಅನುಪಸ್ಥಿತಿಯಲ್ಲಿ ಸಾಕಷ್ಟು ಅವಕಾಶ ಪಡೆದ ಪಂತ್ ರನ್ ಗಳಿಸುವಲ್ಲಿ ಪರದಾಡುತ್ತಿದ್ದಾರೆ. ಅಲ್ಲದೆ ವಿಕೆಟ್ ಕೀಪಿಂಗ್ನಲ್ಲೂ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ಇದರ ಮಧ್ಯೆ ಹೋದಲ್ಲೆಲ್ಲಾ ಮೈದಾನದಲ್ಲೇ ಪಂತ್ ಅಭಿಮಾನಿಗಳಿಂದ ಹಿಯ್ಯಾಳನೆಗೆ ಒಳಗಾಗುತ್ತಿದ್ದಾರೆ.