ಕರ್ನಾಟಕ

karnataka

ETV Bharat / sports

ಹ್ಯಾಟ್ರಿಕ್​ ಪಡೆದ ಚಹಾರ್​ಗೆ​ ವಿಶ್​ ಮಾಡಲು ಹೋಗಿ ಬಿಸಿಸಿಐ ಎಡವಟ್ಟು! - ಬಿಸಿಸಿಐ ವಿರುದ್ಧ ಟ್ವಿಟ್ಟಿಗರ ಆಕ್ರೋಶ

20 ಕ್ರಿಕೆಟ್​ನಲ್ಲಿ ಸಾಧನೆ ಮಾಡಿದವರನ್ನು ಹೊಗಳಿ ಟ್ವೀಟ್​ ಮಾಡಿದ ಬಿಸಿಸಿಐ ವಿರುದ್ಧ ಕ್ರಿಕೆಟ್​ ಅಭಿಮಾನಿಗಳು ಕಿಡಿಕಾರುತ್ತಿರುವುದಕ್ಕೆ ಕಾರಣವೆಂದರೆ 'ಹ್ಯಾಟ್ರಿಕ್​ ಪಡೆದ ಮೊದಲ ಭಾರತೀಯ' ಎಂಬ ಪದ ಬಳಕೆ ಮಾಡಿರುವುದು.

Deepak Chahar

By

Published : Nov 11, 2019, 7:32 PM IST

ಮುಂಬೈ:ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್​ ಪಡೆದ ದೀಪಕ್​ ಚಹಾರ್​ ಶುಭಕೋರಲು ಹೋದ ಬಿಸಿಸಿಐ ಟ್ರೋಲ್​ಗೆ ತುತ್ತಾಗಿದೆ.

ಟಿ20 ಕ್ರಿಕೆಟ್​ನಲ್ಲಿ ಸಾಧನೆ ಮಾಡಿದವರನ್ನು ಹೊಗಳಿ ಟ್ವೀಟ್​ ಮಾಡಿದ ಬಿಸಿಸಿಐ ವಿರುದ್ಧ ಕ್ರಿಕೆಟ್​ ಅಭಿಮಾನಿಗಳು ಕಿಡಿಕಾರುತ್ತಿರುವುದಕ್ಕೆ ಕಾರಣವೆಂದರೆ 'ಹ್ಯಾಟ್ರಿಕ್​ ಪಡೆದ ಮೊದಲ ಭಾರತೀಯ' ಎಂಬ ಪದ ಬಳಕೆ ಮಾಡಿರುವುದು.

ಹೌದು, ಅಭಿಮಾನಿಗಳ ಕೋಪಕ್ಕೂ ಕಾರಣವಿದೆ. ದೀಪಕ್​ ಚಹಾರ್​ಗೂ ಮೊದಲು ಮಹಿಳಾ ತಂಡದ ಸ್ಪಿನ್​ ಬೌಲರ್​ ಏಕ್ತಾ ಬಿಸ್ತ್​ 2012ರಲ್ಲೇ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದರು. ಇದನ್ನು ಮರೆತ ಬಿಸಿಸಿಐ ಹ್ಯಾಟ್ರಿಕ್​ ವಿಕೆಟ್​ ಪಡೆದ ಮೊದಲ ಭಾರತೀಯ ಕ್ರಿಕೆಟರ್​ ಎಂದು ಬರೆದುಕೊಂಡಿದೆ.

ಇದರಿಂದ ರೊಚ್ಚಿಗೆದ್ದಿರುವ ಕೆಲವು ಅಭಿಮಾನಿಗಳು ಏಕ್ತ್​ ಬಿಸ್ತ್​ ಕೂಡ ಭಾರತೀಯಳು, ಅವರ ಬಳಿ ಭಾರತದ ಪಾಸ್​ಪೋರ್ಟ್ ಹೊಂದಿದ್ದಾರೆ ಎಂದು ಬಿಸಿಸಿಐ ಲಿಂಗತಾರತಮ್ಯ ನೀತಿಯನ್ನು ಖಂಡಿಸಿದ್ದಾರೆ.

ABOUT THE AUTHOR

...view details