ಕರ್ನಾಟಕ

karnataka

ETV Bharat / sports

ಆಸೀಸ್​​ ವಿರುದ್ಧದ ಏಕದಿನ ಸರಣಿಗೆ 'ಡಿಕೆ'ಗೆ ಇಲ್ಲ ಚಾನ್ಸ್​: ಟ್ವಿಟ್ಟರ್​ನಲ್ಲಿ ಅಭಿಮಾನಿಗಳು ಬೇಸರ - ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಕಾರ್ತಿಕ್​ ಆಯ್ಕೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದ್ರೆ ಆಯ್ಕೆ ಸಮಿತಿ ದಿನೇಶ್​ ಕಾರ್ತಿಕ್​ ಅವರನ್ನ ಆಯ್ಕೆ ಮಾಡದಿರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಟೀಂ ಇಂಡಿಯಾ ಆಟಗಾರ ದಿನೇಶ್​ ಕಾರ್ತಿಕ್​

By

Published : Feb 16, 2019, 3:10 PM IST

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಎರಡು ಟಿ-20 ಪಂದ್ಯಗಳ ಸರಣಿ ಹಾಗೂ ಐದು ಏಕದಿನ ಪಂದ್ಯಗಳ ಸರಣಿಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದೆ. ಟಿ-20 ಸರಣಿಯಲ್ಲಿ ದಿನೇಶ್​ ಕಾರ್ತಿಕ್​ಗೆ ಸ್ಥಾನ ನೀಡಲಾಗಿದ್ದು, ಏಕದಿನ ಸರಣಿಯಲ್ಲಿ ಡಿಕೆಗೆ ಅವಕಾಶ ನೀಡಿಲ್ಲ. ಇದಕ್ಕೆ ಅಭಿಮಾನಿಗಳು ಟ್ವಿಟ್ಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ದಿನೇಶ್​ ಕಾರ್ತಿಕ್​ 2004ರಲ್ಲಿ ಭಾರತ ಕ್ರಿಕೆಟ್​ ತಂಡಕ್ಕೆ ವಿಕೆಟ್ ​ಕೀಪರ್ ಬ್ಯಾಟ್ಸ್​ಮನ್​ ಆಗಿ ಪಾದಾರ್ಪಣೆ ಮಾಡಿದರು. ಅದೇ ವರ್ಷ ಎಂ.ಎಸ್​. ಧೋನಿ ಕೂಡ ಪಾದಾರ್ಪಣೆ ಮಾಡಿದ್ದರಿಂದ ಕಾರ್ತಿಕ್​ಗೆ ಅವಕಾಶಗಳು ಕಡಿಮೆಯಾದವು. ಆದ್ರೆ ಸ್ಥಾನ ಗಿಟ್ಟಿಸಿಕೊಂಡಾಗೆಲ್ಲ ಕಾರ್ತಿಕ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

2018ರಿಂದ ಕಾರ್ತಿಕ್​ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಕಾರ್ತಿಕ್​ ಆಯ್ಕೆಯಾಗುತ್ತಾರೆ ಎಂಬ ಭರವಸೆ ಇತ್ತು. ಆದ್ರೆ ಆಯ್ಕೆ ಸಮಿತಿ ಟಿ-20 ಸರಣಿಗೆ ಆಯ್ಕೆ ಮಾಡಿದ್ದು, ಏಕದಿನ ಪಂದ್ಯಗಳಿಂದ ಕೈ ಬಿಡಲಾಗಿದೆ.

ಆಯ್ಕೆ ಸಮಿತಿಯ ನಿರ್ಧಾರದಿಂದ ಅಭಿಮಾನಿಗಳು ಬೇಸರಗೊಂಡಿದ್ದು, ಟ್ವಿಟ್ಟರ್​ನಲ್ಲಿ ಕಾರ್ತಿಕ್​ ಪರ ಬ್ಯಾಟ್​ ಬೀಸಿದ್ದಾರೆ.

ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ನೀವೂ ಖಂಡಿತವಾಗಿಯೂ 2019ರ ವಿಶ್ವಕಪ್​ ಸರಣಿಗೆ ಆಯ್ಕೆಯಾಗುತ್ತೀರ ಅಂತ ಅಭಿಮಾನಿಗಳು ಟ್ವೀಟ್​ ಮಾಡುತ್ತಿದ್ದಾರೆ.

ABOUT THE AUTHOR

...view details