ಕರ್ನಾಟಕ

karnataka

ETV Bharat / sports

ಟೀಂ​ ಇಂಡಿಯಾ ಕೋಚ್​ ರವಿ ಶಾಸ್ತ್ರಿಗೆ 58ರ ಸಂಭ್ರಮ... ಶುಭಾಶಯ ಕೋರಿದ ಕೊಹ್ಲಿ - ವಿರಾಟ್​ ಕೊಹ್ಲಿ

ಕಳೆದ ಮೂರು ವರ್ಷಗಳಿಂದ ಭಾರತ ತಂಡದ ಕೋಚ್​ ಆಗಿ ವಿರಾಟ್​ ಕೊಹ್ಲಿ ಪಡೆಯನ್ನು ವಿಶ್ವ ಶ್ರೇಷ್ಠ ತಂಡವನ್ನಾಗಿ ಮಾಡುವಲ್ಲಿ ರವಿ ಶಾಸ್ತ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಅವರು 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ವಿರಾಟ್​ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

Ravi Shastri turns 58
Ravi Shastri turns 58

By

Published : May 27, 2020, 3:08 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ರವಿ ಶಾಸ್ತ್ರಿ ಇಂದು 58ನೇ ವಸಂತಕ್ಕೆ ಕಾಲಿಟ್ಟಿದ್ದು, ವಿರಾಟ್​ ಕೊಹ್ಲಿ, ಬಿಸಿಸಿಐ ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಕಳೆದ ಮೂರು ವರ್ಷಗಳಿಂದ ಭಾರತ ತಂಡದ ಕೋಚ್​ ಆಗಿ ವಿರಾಟ್​ ಕೊಹ್ಲಿ ಪಡೆಯನ್ನು ವಿಶ್ವ ಶ್ರೇಷ್ಠ ತಂಡವನ್ನಾಗಿ ಮಾಡುವಲ್ಲಿ ರವಿ ಶಾಸ್ತ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಅವರು 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ವಿರಾಟ್​ ಕೊಹ್ಲಿ ಸೇರಿದಂತೆ ಹಲವಾರು ಕ್ರಿಕೆಟಿಗರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

ಹಲವರು ಆತ್ಮವಿಶ್ವಾಸ ತೋರುತ್ತಾರೆ, ಆದರೆ ಕೆಲವೇ ಕೆಲವು ಮಂದಿ ಮಾತ್ರ ಧೈರ್ಯಶಾಲಿಗಳಾಗಿರುತ್ತಾರೆ. ಜನ್ಮದಿನದ ಶುಭಾಶಯಗಳು ರವಿ ಭಾಯ್, ದೇವರು ಒಳ್ಳೆಯದು ಮಾಡಲಿ ಎಂದು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಟ್ವೀಟ್​ ಮಾಡಿದ್ದಾರೆ.

ಟೆಸ್ಟ್​ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಕೂಡ ವಿಶ್​ ಮಾಡಿದ್ದು, ‘ಹುಟ್ಟುಹಬ್ಬದ ಶುಭಾಶಯಗಳು ರವಿ ಭಾಯ್​, ಬೇಗ ಸಿಗೋಣ’ ಎಂದು ಟ್ವೀಟ್​ ಮಾಡಿದ್ದಾರೆ.

ವಿಕೆಟ್​ ಕೀಪರ್ ವೃದ್ದಿಮಾನ್ ಸಹಾ, ವಿರಾಟ್ ಕೊಹ್ಲಿ ನೇತೃತ್ವದ ಆರ್​ಸಿಬಿ, ಐಸಿಸಿ ಹಾಗೂ ಬಿಸಿಸಿಐ ಶಾಸ್ತ್ರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ರವಿ ಶಾಸ್ತ್ರಿ ಭಾರತ ತಂಡದ ಪರ 80 ಟೆಸ್ಟ್ ಪಂದ್ಯ ಹಾಗೂ 150 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಕ್ರಮವಾಗಿ 3830 ರನ್​ ಹಾಗೂ 3108 ರನ್ ​ಗಳಿಸಿದ್ದಾರೆ.

ABOUT THE AUTHOR

...view details