ಕರ್ನಾಟಕ

karnataka

ETV Bharat / sports

ಮೊದಲ ಟೆಸ್ಟ್​ನಿಂದ ಅಶ್ವಿನ್​, ರೋಹಿತ್​ಗೆ ಹೊರಕ್ಕೆ... ಅಭಿಮಾನಿಗಳ ಆಕ್ರೋಶ - ಟೆಸ್ಟ್​ ಕ್ರಿಕೆಟ್​

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಪಂದ್ಯಕ್ಕೆ ಹಿರಿಯ ಕ್ರಿಕೆಟಿಗರಾದ ರೋಹಿತ್​ ಶರ್ಮಾ ಹಾಗೂ ಅಶ್ವಿನ್​ರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Ashwin

By

Published : Aug 22, 2019, 8:25 PM IST

ಆ್ಯಂಟಿಗುವಾ: ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಿಂದ ಅಶ್ವಿನ್​ ಕೈಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸದ್ಯ ಕೆಲವು ವರ್ಷಗಳಿಂದ ರವಿಚಂದ್ರನ್​ ಅಶ್ವಿನ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೇವಲ ಟೆಸ್ಟ್​ ಕ್ರಿಕೆಟ್​ಗೆ ಸೀಮಿತವಾಗಿಬಿಟ್ಟಿದ್ದಾರೆ. ಆದರೆ ಇದೀಗ ಅಲ್ಲಿಂದಲೂ ಗೇಟ್​​ಪಾಸ್​ ನೀಡಲಾಗುತ್ತಿದೆ. ಇಂದಿನಿಂದ ಆರಂಭವಾಗಿರುವ ಮೊದಲ ಟೆಸ್ಟ್​ನಲ್ಲಿ ಆರ್​ ಆಶ್ವಿನ್​ ಬೆಂಚ್ ಕಾಯುವಂತಾಗಿದೆ.

ಅಶ್ವಿನ್​ ವೆಸ್ಟ್​ ಇಂಡೀಸ್​ ವಿರುದ್ಧ ಆಲ್​ರೌಂಡರ್​ ಆಟ ಪ್ರದರ್ಶಿಸಿದ್ದಾರೆ. 11ಪಂದ್ಯಗಳಲ್ಲಿ 552 ರನ್​ ಬಾರಿಸಿರುವ ಅವರು 4 ಶತಕ ಸಿಡಿಸಿದ್ದಾರೆ. ಇನ್ನು ಬೌಲಿಂಗ್​ನಲ್ಲಿ 60 ವಿಕೆಟ್​ ಪಡೆದಿದ್ದಾರೆ. 4 ಬಾರಿ 5 ವಿಕೆಟ್​ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಕಳೆದ ವಿಂಡೀಸ್​ ಪ್ರವಾಸದ ವೇಳೆ ಅಶ್ವಿನ್​ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇನ್ನು ಟೆಸ್ಟ್​ನಲ್ಲಿ ಖಾಯಂ ಸ್ಥಾನದ ನಿರೀಕ್ಷೆಯಲ್ಲಿರುವ ರೋಹಿತ್​ ಶರ್ಮಾರನ್ನು ಕೂಡ ತಂಡದಿಂದ ಕೈಬಿಟ್ಟಿರುವುದನ್ನು ಅಭಿಮಾನಿಗಳು ಖಂಡಿಸಿದ್ದಾರೆ. ಅಶ್ವಿನ್​ ಸ್ಥಾನಕ್ಕೆ ರವೀಂದ್ರ ಜಡೇಜಾರನ್ನು, ರೋಹಿತ್​ ಜಾಗಕ್ಕೆ ಹನುಮ ವಿಹಾರಿಯನ್ನು ಆಯ್ಕೆ ಮಾಡಲಾಗಿದೆ.

ABOUT THE AUTHOR

...view details