ಕರ್ನಾಟಕ

karnataka

ETV Bharat / sports

ಚೊಚ್ಚಲ ವಿಶ್ವಕಪ್​ ಸೂಪರ್​ ಲೀಗ್​ನಿಂದ ಟಿವಿ ಅಂಪೈರ್​ಗೆ ಕ್ರೀಸ್​ ನೋಬಾಲ್​ ನೀಡುವ ಜವಾಬ್ದಾರಿ - ಐಸಿಸಿ

ಈಗಾಗಲೆ ಟಿವಿ ಅಂಪೈರ್​ ಫ್ರಂಟ್​ ಫೂಟ್​ ನೋಬಾಲ್​ ಮಾನಿಟರಿಂಗ್​ ತಂತ್ರಜ್ಞಾನದ ಪ್ರಯೋಗವನ್ನು ಕಳೆದ ವರ್ಷ ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಸರಣಿಯಲ್ಲಿ ಬಳಿಸಿಕೊಳ್ಳಲಾಗಿತ್ತು ಎಂದು ಐಸಿಸಿ ವೆಬ್​ಸೈಟ್​ನಲ್ಲಿ ವರದಿ ಮಾಡಿದೆ.

ಫ್ರಂಟ್​ ಫೂಟ್​ ನೋಬಾಲ್​ ಮಾನಿಟರಿಂಗ್
ಫ್ರಂಟ್​ ಫೂಟ್​ ನೋಬಾಲ್​ ಮಾನಿಟರಿಂಗ್

By

Published : Jul 27, 2020, 7:47 PM IST

ಲಂಡನ್​:ಚೊಚ್ಚಲ ಐಸಿಸಿ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಟಿವಿ ಅಂಪೈರ್‌ಗಳು ಕ್ರೀಸ್​ ನೋ-ಬಾಲ್ ಕರೆಗಳನ್ನು ನೀಡುವ ಜವಾಬ್ದಾರಿ ಹೊರಲಿದ್ದಾರೆ.

ಐಸಿಸಿ ವಿಶ್ವಕಪ್​ ಸೂಪರ್ ಲೀಗ್ ಈ ವಾರದಿಂದ ಐರ್ಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ.

ಈಗಾಗಲೆ ಟಿವಿ ಅಂಪೈರ್​ ಫ್ರಂಟ್​ ಫೂಟ್​ ನೋಬಾಲ್​ ಮಾನಿಟರಿಂಗ್​ ತಂತ್ರಜ್ಞಾನದ ಪ್ರಯೋಗವನ್ನು ಕಳೆದ ವರ್ಷ ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಸರಣಿಯಲ್ಲಿ ಬಳಿಸಿಕೊಳ್ಳಲಾಗಿತ್ತು ಎಂದು ಐಸಿಸಿ ವೆಬ್​ಸೈಟ್​ನಲ್ಲಿ ವರದಿ ಮಾಡಿದೆ.

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಸರಣಿಯಲ್ಲಿ ಈ ತಂತ್ರಜ್ಞಾನ ಪ್ರಯೋಗ ಅಪೆಕ್ಸ್​ ಕ್ರಿಕೆಟ್​ ಬಾಡಿಗೆ ತೃಪ್ತಿ ತಂದಿತ್ತು. ನಂತರ ಇದೇ ವಿಧಾನವನ್ನು ಈ ವರ್ಷದ ಆರಂಭದಲ್ಲಿ ಜರುಗಿದ ಮಹಿಳೆಯರ ಟಿ20 ವಿಶ್ವಕಪ್​ನಲ್ಲೂ ಮೂರನೇ ಅಂಪೈರ್‌ಗಳೆ ಫ್ರಂಟ್-ಫೂಟ್ ನೋ-ಬಾಲ್ ಗುರುತಿಸುತ್ತಿದ್ದರು.

ಸೌತಾಂಪ್ಟನ್‌ನಲ್ಲಿ ಜುಲೈ 30 ರಂದು ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಸರಣಿಯೊಂದಿಗೆ ವಿಶ್ವಕಪ್​ ಸೂಪರ್​ ಲೀಗ್​ ಪ್ರಾರಂಭವಾಗಲಿದೆ ಎಂದು ಐಸಿಸಿ ಇಂದು ಬೆಳಿಗ್ಗೆ ಚೊಚ್ಚಲ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್​ಗೆ ಚಾಲನೆ ನೀಡಿತ್ತು. ಇದೀಗ ಇದೇ ಟೂರ್ನಿಯಿಂದ ಈ ಹೊಸ ತಂತ್ರಜ್ಞಾನ ಬಳಕೆಗೆ ಚಾಲನೆ ನೀಡಲಾಗುವುದು ಎಂದು ಐಸಿಸಿ ತನ್ನ ವೆಬ್​ಸೈಟ್​ನಲ್ಲಿ ವರದಿ ಮಾಡಿದೆ.

ಇನ್ನು ಸೂಪರ್​ ಲೀಗ್​ನಲ್ಲಿ ಟೆಸ್ಟ್​ ಆಡಲು ಮಾನ್ಯತೆ ಪಡೆದಿರುವ ಎಲ್ಲಾ 12 ರಾಷ್ಟ್ರ ಹಾಗೂ 2015-17ರಲ್ಲಿ ಐಸಿಸಿ ಸೂಪರ್​ ಲೀಗ್​ನಲ್ಲಿ ಪ್ರಶಸ್ತಿ ಗೆದ್ದಿರುವ ನೆದರ್ಲೆಂಡ್​ ಭಾಗವಹಿಸಿಲಿದೆ. ಈ ಟೂರ್ನಿಯಲ್ಲಿ ಗರಿಷ್ಟ ಅಂಕ ಪಡೆದ 7 ತಂಡಗಳು ಭಾರತದಲ್ಲಿ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ನೇರ ಅರ್ಹತೆ ಪಡೆಯಲಿವೆ. ಉಳಿದ 5 ತಂಡಗಳು ಕ್ವಾಲಿಫೈಯರ್​ ಮೂಲಕ ಬರಲಿವೆ. ಮೂರು ವರ್ಷದ ಅವಧಿಯಲ್ಲಿ ಎಲ್ಲಾ ತಂಡಗಳು ತಲಾ 4 ತವರು ಮತ್ತು ವಿದೇಶದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿವೆ.

ABOUT THE AUTHOR

...view details