ಕರ್ನಾಟಕ

karnataka

ETV Bharat / sports

ಕಾರ್ಗಿಲ್​ ಯುದ್ಧದಲ್ಲಿ ಹೋರಾಡುವುದಕ್ಕೆ 1.71 ಕೋಟಿ ರೂ. ಒಪ್ಪಂದವನ್ನೇ ತಿರಸ್ಕರಿಸಿದ್ದೆ: ಶೋಯಬ್​ ಅಖ್ತರ್​ - 000-pound county contract

ಜನರಿಗೆ ಈ ಕಥೆಯ ಬಗ್ಗೆ ಅಷ್ಟೇನೂ ತಿಳಿದಿಲ್ಲ. ನಾನು 1,75,00 ಪೌಂಡ್​ ಮೊತ್ತದ ಒಪ್ಪಂದವನ್ನು ಹೊಂದಿದ್ದೆ. ನಂತರ 2002ರಲ್ಲೂ ನಾನು ಮತ್ತೊಂದು ದೊಡ್ಡ ಒಪ್ಪಂದವನ್ನು ಮಾಡಿಕೊಂಡಿದ್ದೆ. ಆದರೆ ಕಾರ್ಗಿಲ್​ ಯುದ್ಧ ನಡೆದಾಗ ನಾನು ಈ ಎರಡು ಒಪ್ಪಂದಗಳನ್ನು ತಿರಸ್ಕರಿಸಿದ್ದೆ ಎಂದು ಅಖ್ತರ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಶೋಯಬ್​ ಅಖ್ತರ್
ಶೋಯಬ್​ ಅಖ್ತರ್

By

Published : Aug 3, 2020, 5:26 PM IST

ಲಾಹೋರ್​: 1999 ರ ಕಾರ್ಗಿಲ್​ ವಿರುದ್ಧದಲ್ಲಿ ಹೋರಾಡುವುದಕ್ಕಾಗಿ ನಾಟಿಂಗ್​ಹ್ಯಾಮ್​ಶೈರ್​ ಕೌಂಟಿ ತಂಡದ ಜೊತೆ 1,75,000 ಪೌಂಡ್ಸ್​ ಮೊತ್ತದ ಒಪ್ಪಂದವನ್ನು ತಿರಸ್ಕರಿಸಿದ್ದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಬ್​ ಅಖ್ತರ್​ ತಿಳಿಸಿದ್ದಾರೆ.

ಆಪರೇಷನ್​ ವಿಜಯ್​ ಎಂಬ ಹೆಸರನ್ನು ಹೊಂದಿರುವ ಕಾರ್ಗಿಲ್​ ಯುದ್ಧವೂ ಸುಮಾರು 16,000 ಅಡಿಗಳಷ್ಟು ಎತ್ತರದಲ್ಲಿ ನಡೆದಿತ್ತು. ಇದರಲ್ಲಿ 1042 ಪಾಕಿಸ್ತಾನ ಸೈನಿಕರು ಹಾಗೂ 527 ಭಾರತೀಯ ಸೈನಿಕರು ಪ್ರಾಣತ್ಯಾಗ ಮಾಡಿದ್ದರು.

ಜನರಿಗೆ ಈ ಕಥೆಯ ಬಗ್ಗೆ ಅಷ್ಟೇನೂ ತಿಳಿದಿಲ್ಲ. ನಾನು 1,75,00 ಪೌಂಡ್​ ಮೊತ್ತ ಒಪ್ಪಂದವನ್ನು ಹೊಂದಿದ್ದೆ. ನಂತರ 2002ರಲ್ಲೂ ನಾನು ಮತ್ತೊಂದು ದೊಡ್ಡ ಒಪ್ಪಂದವನ್ನು ಮಾಡಿಕೊಂಡಿದ್ದೆ. ಆದರೆ ಕಾರ್ಗಿಲ್ ಯುದ್ಧ ಆರಂಭವಾದಾಗ​ ನಾನು ಈ ಎರಡು ಒಪ್ಪಂದಗಳನ್ನು ತಿರಸ್ಕರಿಸಿದ್ದೆ ಎಂದು ಅಖ್ತರ್​ ಸಂದರ್ಶನವೊಂದರಲ್ಲಿ ಅಖ್ತರ್​ ಹೇಳಿಕೊಂಡಿದ್ದಾರೆ.

"ನಾನು ಲಾಹೋರ್​ನ ಹೊರವಲಯದಲ್ಲಿ ನಿಂತಿದ್ದೆ. ಆ ಸಂದರ್ಭದಲ್ಲಿ ಜನರಲ್​ ಒಬ್ಬರು ಅಲ್ಲಿ ಏನು ಮಾಡುತ್ತಿದ್ದೀರಾ ಎಂದು ಕೇಳಿದರು. ಅದಕ್ಕೆ ನಾನು ಯುದ್ಧ ಆರಂಭವಾಗುತ್ತಿದೆ, ನಾವು ಒಟ್ಟಿಗೆ ಸಾಯೋಣ ಎಂದು ಹೇಳಿದೆ. ನಾನು ಈ ರೀತಿ ಎರಡು ಬಾರಿ ಕೌಂಟಿ ಕ್ರಿಕೆಟ್​ ತೊರದಿದ್ದೇನೆ. ಈ ವಿಷಯ ಕೇಳಿ ಕೌಂಟಿ ತಂಡಗಳು ಆಘಾತಕ್ಕೊಳಗಾಗಿದ್ದವು. ಆದರೆ ನಾನು ಅದರ ಕಡೆ ಗಮನ ನೀಡದೆ ಕಾಶ್ಮೀರದಲ್ಲಿರುವ ನನ್ನ ಸ್ನೇಹಿತನಿಗೆ ಕರೆ ಮಾಡಿ, ನಾನು ಯುದ್ಧದಲ್ಲಿ ಹೋರಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದೆ" ಎಂದು ತಾನು ದೇಶಕ್ಕಾಗಿ ಬಿಟ್ಟುಕೊಟ್ಟ ಕೋಟಿ ರೂ.ಗಳ ಒಪ್ಪಂದದ ಬಗ್ಗೆ ಹೇಳಿಕೊಂಡಿದ್ದಾರೆ.

ಕ್ರೀಡೆ ಮತ್ತು ರಾಜಕೀಯಗಳನ್ನು ದೂರವಿಡಬೇಕು. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಎದುರಾಗ ಎರಡು ತಂಡಗಳ ಆಟಗಾರರು ಉತ್ತಮ ಸ್ನೇಹವನ್ನು ಹಂಚಿಕೊಳ್ಳುತ್ತಾರೆ ಎಂದು ಅಖ್ತರ್​ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆಯೂ ಕೋವಿಡ್​ 19 ವಿರುದ್ಧ ಹೋರಾಡಲು ದೇಣಿಗೆ ಸಂಗ್ರಹಿಸಲು ಎರಡು ದೇಶಗಳು ತಟಸ್ಥ ಸ್ಥಳದಲ್ಲಿ ದ್ವಿಪಕ್ಷೀಯ ಸರಣಿ ಆಯೋಜಿಸಲು ಸಲಹೆ ನೀಡಿದ್ದರು. ಆದರೆ ಭಾರತ ತಂಡದ ಮಾಜಿ ನಾಯಕ ಕಪಿಲ್​​ ದೇವ್​ ನಮಗೆ ಹಣದ ಅವಶ್ಯಕತೆಯಿಲ್ಲ ಎಂದು ತಿರುಗೇಟು ನೀಡಿದ್ದರು.

ABOUT THE AUTHOR

...view details