ಅಹಮದಾಬಾದ್: ವಿಶ್ವದ ಅತಿದೊಡ್ಡ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆ ಮಾಡಿದ ಅಮೆರಿಕ ಅಧ್ಯಕ್ಷ ಭಾರತದ ಕ್ರಿಕೆಟ್ ದಂತಕತೆ ಸಚಿನ್ ಹಾಗೂ ವಿರಾಟ್ ಕೊಹ್ಲಿ ಹೆಸರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು
ಮೋದಿಯವರ ಕನಸಿನ ಕ್ರಿಕೆಟ್ ಮೈದಾನವಾ ಮೊಟೇರಾ ಸ್ಟೇಡಿಯಂ ಅನ್ನು ಉದ್ಘಾಟನೆ ಮಾಡಿದ ನಂತರ ಟ್ರಂಪ್ ತಮ್ಮ ಸುದೀರ್ಘ ಭಾಷಣದ ನಡುವೆ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರ ಹೆಸರನ್ನು ಉಚ್ಛಾರ ಮಾಡಿದರು.
" ಈ ದೇಶದ ಜನಸಾಮಾನ್ಯರು ಕ್ರಿಕೆಟ್ ದಿಗ್ಗಜರನ್ನು ಹುರಿದುಂಬಿಸುತ್ತಾರೆ. ಸಚಿನ್ ತೆಂಡೂಲ್ಕರ್‌ರಿಂದ ವಿರಾಟ್ ಕೊಹ್ಲಿವರೆಗೆ ಇಲ್ಲಿನ ಕ್ರಿಕೆಟಿಗರು ವಿಶ್ವಶ್ರೇಷ್ಠರಾಗಿದ್ದಾರೆ" ಎಂದು ಟ್ರಂಪ್ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಭಾರತೀಯರಿಗೆ ನೆನಪಿಸಿದರು. ಟ್ರಂಪ್ ಭಾರತದ ಈ ಇಬ್ಬರು ಮಹಾನ್ ಕ್ರಿಕೆಟಿಗರ ಹೆಸರನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದಂತೆ ಕಾರ್ಯಕ್ರದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರು ಒಕ್ಕೊರಲಿನಿಂದ ಹರ್ಷೋದ್ಘಾರ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಮೊಗದಲ್ಲೂ ಕೂಡ ನಗು ಅರಳಿತ್ತು.
ಅಮೆರಿಕದಲ್ಲಿ ಕಳೆದ ವರ್ಷ ಮೋದಿಯವರಿಗಾಗಿ 'ಹೌಡಿ ಮೋದಿ' ಕಾರ್ಯಕ್ರಮ ಏರ್ಪಡಿಸಿದಂತೆ ಇಂದು ಮೊಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಭಾಗವಹಿಸಿದ್ದರು.